ಉತ್ತರಾಖಂಡ್ನಲ್ಲಿ ಮೇಘಸ್ಫೋಟದಿಂದ ಕನ್ನಡಿಗರ ಸಂಕಷ್ಟ ಮುಂದುವರಿದಿದೆ. ಮೇಘಸ್ಫೋಟದ ಬಳಿಕ ಹಲವೆಡೆ ಗುಡ್ಡ ಕುಸಿತ ಕೂಡ ಆಗಿದ್ದು ಸ್ನೇಹಿತರ ಗುಂಪಲ್ಲಿದ್ದ ಮೆಂಬರ್ ಮಿಸ್ ಆಗಿದ್ದರಂತೆ.
ಬೆಂಗಳೂರಿನಿಂದ ಕೇದಾರನಾಥ್ಗೆ ತೆರಳಿದ್ದ 15 ಜನರ ಟೀಮ್ನಲ್ಲಿ 6 ಜನ ಕನ್ನಡಿಗರು ನಾಪತ್ತೆಯಾಗಿದ್ದಾರೆ. ಸದ್ಯ 5 ಜನರನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಿರೋ ರಕ್ಷಣಾ ಪಡೆ ಉಳಿದವರು ಕೇದಾರನಾಥ್ನ ರೆಸ್ಕ್ಯೂ ಪಾಯಿಂಟ್ನಲ್ಲಿರೋ ಮಾಹಿತಿ ಲಭ್ಯ ಆಗಿದೆ.
ಗುಡ್ಡ ಕುಸಿತ, ಮೇಘಸ್ಫೋಟದ ಮಧ್ಯೆ ಕನ್ನಡಿಗರ ಪರದಾಟ ಮುಂದುವರಿದಿದ್ದು ತಿನ್ನಲು ಊಟ ಕೂಡ ಸಿಗದೇ ಒದ್ದಾಡ್ತಿರೋ ಬಗ್ಗೆ ಮಾಹಿತಿ ಇದೆ. ಎರಡ್ಮೂರು ದಿನದಿಂದ ಬಿಸ್ಕೆಟ್ ತಿಂದು ಕನ್ನಡಿಗರು ಕಾಲ ಕಳೆಯುವ ಹಾಗಾಗಿದೆ.