ಕೇರಳ: ಬಹುಭಾಷಾ ನಟಿ ಪ್ರಿಯಾಮಣಿ ಅವರು ಕೇರಳದ ದೇವಸ್ಥಾನವೊಂದಕ್ಕೆ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾಗೆಂದು ಇದು ನಿಜವಾದ ಆನೆಯಲ್ಲ. ಬದಲಾಗಿ ನಿಜವಾದ ಆನೆಯಂತೆಯೇ ಇರುವ ಯಾಂತ್ರಿಕ ಆನೆಯಾಗಿದೆ.
ದಾನ ನೀಡಿರುವ ಆನೆಯ ಹೆಸರು ಮಹದೇವನ್ ಆಗಿದ್ದು, ಕೇರಳದ ಕೊಚ್ಚಿಯಲ್ಲಿನ ತ್ರಿಕಾಯಿಲ್ ಮಹದೇವನ್ ದೇವಾಲಯಕ್ಕೆ ನಟಿ ಪ್ರಿಯಾಮಣಿ ಯಾಂತ್ರಿಕ ಆನೆಯನ್ನು ನೀಡಿದ್ದಾರೆ. ಅವರು ದೇವಸ್ಥಾನಕ್ಕೆ ಆನೆ ನೀಡಿರುವುದು ಯಾವುದೇ ಹರಕೆ ತೀರಿಸಲು ಅಥವಾ ಧಾರ್ಮಿಕ ಕಾರಣಕ್ಕಾಗಿ ಅಲ್ಲ. ಬದಲಾಗಿ ಒಂದು ಪ್ರಬಲವಾದ ಕಾರಣಕ್ಕೆ ಈ ಆನೆಯನ್ನು ದಾನ ನೀಡಿದ್ದಾರೆ.
ಕೊಚ್ಚಿಯ ತ್ರಿಕಾಯಿಲ್ ಮಹದೇವನ್ ದೇವಸ್ಥಾನವು, ಇನ್ನು ಮುಂದೆ ನಾವು ಜೀವಂತ ಆನೆಯನ್ನು ದೇವಾಲಯದ ಯಾವುದೇ ಧಾರ್ಮಿಕ ಅಥವಾ ಇನ್ಯಾವುದೇ ಕಾರ್ಯಗಳಿಗೆ ಬಳಸುವುದಿಲ್ಲ. ಜೀವಂತ ಆನೆಯನ್ನು ಹಾಗೆ ಧಾರ್ಮಿಕ, ಪ್ರದರ್ಶನಕ್ಕಾಗಿ ಬಳಸುವುದು ಕ್ರೂರತೆ ಎಂದು ನಿರ್ಧಾರ ಮಾಡಿದೆ. ಜೊತೆಗೆ ದೇವಸ್ಥಾನದ ಈ ನಿರ್ಧಾರವನ್ನು ಪೇಟಾ ಸಹ ಮೆಚ್ಚಿಕೊಂಡಿದೆ. ಜೊತೆಗೆ ನಟಿ ಪ್ರಿಯಾಮಣಿ ಕೋಡ ದೇವಸ್ಥಾನದ ಈ ನಿರ್ಣಯವನ್ನ ಮೆಚ್ಚಿಕೊಂಡಿದ್ದು, ಇದೀಗ ದೇವಾಲಯಕ್ಕೆ ಕೃತಕ ಆನೆಯನ್ನು ಉಡುಗೊರೆಯನ್ನಾಗಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಪ್ರಿಯಾಮಣಿ ನೀಡಿರುವ ಆನೆಯ ಗಾತ್ರವು ನಿಜವಾದ ಆನೆಯ ಗಾತ್ರವನ್ನು ಹೋಲುತ್ತದೆ. ಜೊತೆಗೆ ಈ ಬೃಹತ್ ಆನೆಯನ್ನು ದೇವಾಲಯದ ಮುಂದೆ ಪ್ರತಿಷ್ಠಾಪಿಸಲಾಗುತ್ತದೆ.