ಬೆಂಗಳೂರು: ಕೇರಳದ ವೈನಾಡ ನಲ್ಲಿ ಹತ್ತಿ ಹೆಚ್ಚು ಮಳೆಯಿಂದ ಪ್ರಕೃತಿ ವಿಕೋಪ ದಿಂದ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ,ಜನರನ್ನು ರಕ್ಷಿಸಲು, ಮತ್ತು ಜನರ ಆರೋಗ್ಯ ತಪಾಸಣೆ ಮಾಡುವ ನಿಟ್ಟಿನಲ್ಲಿ ,ಜಿಲ್ಲಾ ಆಡಳಿತ ವತಿಯಿಂದ ,ತಜ್ಞ ವೈದ್ಯರು,ಮತ್ತುತಂಡ ವನ್ನು ಔಷಧಿಗಳೊಂದಿಗೆ ನಿಯೋಜನೆ ಮಾಡಲಾಗಿದೆ.
ಉಪ ವಿಭಾಗಾಧಿಕಾರಿ ವೆಂಕಟರಾಜು ರವರು ಮಾತನಾಡಿ ನಮ್ಮ ಜಿಲ್ಲಾ ಆಡಳಿತ ವತಿಯಿಂದ ನುಲಿತ ತಜ್ಞರನ್ನು ನಿಯೋಜನೆ ಮಾಡಿ ಕೇರಳ ವೈನಾಡಿಗೆ ಕಳಿಸಿ ಕೊಡುತ್ತಿದ್ದೇವೆ ಹಾಗೂ ನಮ್ಮ ಜಿಲ್ಲೆಯಲ್ಲೂ ಸಹ ಅಗತ್ಯ ಔಷಧಿಗಳೊಂದಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ ವರ್ಷ ತಜ್ಞ ವೈದ್ಯರನ್ನು ಕೇರಳದ ವೈನಾಡಿಗೆ ಬೈರನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ತುರ್ತು ವಾಹನವನ್ನು, ನಿಯೋಜನೆ ಮಾಡಿಕೊಂಡಿದ್ದೇವೆ ಜೊತೆಗೆ ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ತುರ್ತು ವಾಹನ ಮತ್ತು 10 ಬೆಡ್ ಗಳ ನ್ನೂ ಸಿದ್ದಪಡಿಸಿ ಕೊಂಡಿದ್ದೇವೆ ಹಾಗೂ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಔಷಧಿಗಳನ್ನು ಸಹ ಇಟ್ಟುಕೊಳಲಾಗಿದೆ ಎಂದು ತಿಳಿಸಿದರು .
ಡಾ|ವರ್ಷ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗಳಾದ ನಾಗೇಂದ್ರ, ರವಿರಾಜ್, RI ಗೌಸ್ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು,ಇನ್ನಿತರರು ಹಾಜರಿದ್ದರು.
				
															
                    
                    
                    
                    































