ಕೇರಳ: ಕೇರಳ ಸರ್ಕಾರದ ಸಚಿವಾಲಯಕ್ಕೆ ಇಂದು ಬೆಳಿಗ್ಗೆ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ.
ಬಾಂಬ್ ಬೆದರಿಕೆ ಬಂದಿರುವುದರಿಂದ ಕೆಲಹೊತ್ತು ಅಲ್ಲಿ ಆಂತಕವನ್ನು ಸೃಷ್ಟಿಯಾಗಿದ್ದು, ಕೇರಳ ಪೊಲೀಸ್ ಪ್ರಧಾನ ಕಚೇರಿಗೆ ದೂರವಾಣಿ ಕರೆ ಬಂದಿದ್ದು. ಸೆಕ್ರೆಟರಿಯೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ.
ಇನ್ನು ಈ ವೇಳೆ ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದು ಹುಸಿ ಬೆದರಿಕೆ ಕರೆ ಎಂದು ಪೊಲೀಸರು ಹೇಳಿದ್ದಾರೆ.
ಕೇರಳ ಸರ್ಕಾರದ ಸಚಿವಾಲಯಕ್ಕೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.