ಶಾಸ್ತ್ರಗಳ ಪ್ರಕಾರ, ಮಂಗಳವಾರ ಮತ್ತು ಶನಿವಾರ ಮಾತ್ರ ದಾರವನ್ನು ಬದಲಾಯಿಸಲು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಅದನ್ನು ಕಟ್ಟಿಕೊಳ್ಳುವುದರಿಂದ ಧನಾತ್ಮಕ ಶಕ್ತಿ ನಿಮ್ಮಲ್ಲಿ ಕಂಡುಬರುತ್ತದೆ.
ಇದನ್ನು ಪುರುಷರು ಬಲಗೈಗೆ ಮತ್ತು ಮಹಿಳೆಯರಿಗೆ ಎಡಕೈಗೆ ಕಟ್ಟಿದರೆ ಉತ್ತಮ. ದಾರವನ್ನು ಕಟ್ಟುವಾಗ ಕೈಯನ್ನು ಮುಷ್ಟಿ ಕಟ್ಟಬೇಕು ಮತ್ತು ಇನ್ನೊಂದು ಕೈ ತಲೆಯ ಮೇಲೆ ಇರಬೇಕು.
ಮತ್ತು ದಾರವನ್ನು ಮೂರು ಸುತ್ತು ಸುತ್ತಬೇಕು. ಹಾಗೇ ಹಳೆಯ ದಾರವನ್ನು ಎಸೆಯಬಾರದು. ಅದನ್ನು ಅರಳೀಮರದ ಕೆಳಗೆ ಇಡಬೇಕು.