ಬೆಂಗಳೂರು: ಖಡಕ್ ಪೊಲೀಸ್ ಆಫೀಸರ್ ಎಂದೇ ಗುರುತಿಸಿಕೊಂಡಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಖಾಕಿ ಬಿಟ್ಟು, ರೇಷ್ಮೆ ಸೀರೆಯುಟ್ಟು ಕೈಯಲ್ಲಿ ಖಡ್ಗ ಹಿಡಿದು ಡಿಫರೆಂಟ್ ಆಗಿ ಹೊಸ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ. ದಸರಾ ಹಬ್ಬದ ಸಂಭ್ರಮದಲ್ಲಿ ಡಿ.ರೂಪಾ ಲಾಠಿ ಬಿಟ್ಟು ಖಡ್ಗ ಹಿಡಿದು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸಿಂಹಾಸನದಲ್ಲಿ ಥೇಟ್ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಹೆಣ್ಣು ನಾಲ್ಕು ಗೋಡೆಯೊಳಗೆ ಬಂಧಿಯಲ್ಲ, ಆಕೆಯೊಳಗೊಂದು ಶಕ್ತಿ ಇದೆ. ಸಮಾಜದಲ್ಲಿ ಸವಾಲುಗಳನ್ನು ಎದುರಿಸಿ ನಿಲ್ಲುವುದರ ಜೊತೆಗೆ ಯಾವುದೇ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬುದಕ್ಕೆ ಡಿ ರೂಪಾ ಉತ್ತಮ ನಿದರ್ಶನ ಎಂದು ಫೋಟೋ ಅಪ್ಲೋಡ್ ಮಾಡಿರುವ ಭಾರ್ಗವಿ ಕೆ. ಆರ್ ಎಂಬವರು ಬರೆದುಕೊಂಡಿದ್ದಾರೆ.