ಸುಲಭದಲ್ಲಿ ಮಾಡಬಹುದಾದ ಉಪಾಹಾರ ಅಥವಾ ಊಟಕ್ಕೆ ಪರ್ಫೆಕ್ಟ್ ಎನಿಸೋ ರೈಸ್ ಐಟಮ್ ಲಿಸ್ಟ್‌ನಲ್ಲಿ ಹಲವು ರೆಸಿಪಿಗಳಿವೆ. ಚಿತ್ರಾನ್ನ, ಪಲಾವು, ರೈಸ್‌ಬಾತ್ ಎಲ್ಲಾ ಬದಿಗಿಟ್ಟು ಏನಾದ್ರೂ ಹೊಸದಾಗಿ ಟ್ರೈ ಮಾಡ್ಬೇಕು ಎನಿಸಿದ್ರೆ ನಾವಿಂದು ಹೇಳಿಕೊಡುತ್ತಿರೋ ಕೊಕೊನಟ್ ಮಿಂಟ್ ರೈಸ್ ನೀವು ಟ್ರೈ ಮಾಡ್ಲೇ ಬೇಕು. ಯಾವಾಗ್ಲೂ ಒಂದೇ ರೀತಿಯ ರೈಸ್ ಐಟಮ್‌ಗಳನ್ನು ಮಾಡೋ ಬದ್ಲು ಈ ರೀತಿ ಡಿಫರೆಂಟ್ ರೆಸಿಪಿಗಳನ್ನೂ ಮನೆಯಲ್ಲಿ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು
- ಅಕ್ಕಿ – 1 ಕಪ್
- ಪುದೀನಾ – ಅರ್ಧ ಕಪ್
- ಹಸಿರು ಮೆಣಸಿನಕಾಯಿ – 2
- ಶುಂಠಿ – 3 ತುಂಡು
- ಬೆಳ್ಳುಳ್ಳಿ – 1 ಗಡ್ಡೆ
- ಕೊತ್ತಂಬರಿ ಸೊಪ್ಪು – ಅರ್ಧ ಕಪ್
- ಎಣ್ಣೆ – 2 ಟೀಸ್ಪೂನ್
- ಉಪ್ಪು – ರುಚಿಗೆ ತಕ್ಕಷ್ಟು
- ತೆಂಗಿನ ತುರಿ – ಕಾಲು ಕಪ್
- ಚಕ್ರಿ ಹೂವು – 1
- ಜೀರಿಗೆ – ಅರ್ಧ ಟೀಸ್ಪೂನ್
- ಲವಂಗ – 6
- ಏಲಕ್ಕಿ – 4
- ದಾಲ್ಚಿನ್ನಿ – 2
- ಗೋಡಂಬಿ ಬೀಜಗಳು – 2 ಟೀಸ್ಪೂನ್
ಮಾಡುವ ವಿಧಾನ
- ಮೊದಲಿಗೆ ಅಕ್ಕಿಯನ್ನು ತೊಳೆದು 15 ನಿಮಿಷ ನೀರಲ್ಲಿ ನೆನೆಸಿಡಿ.
- ಪುದೀನಾ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ತೆಂಗಿನ ತುರಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.
- ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಚಕ್ರಿ ಹೂವು, ಜೀರಿಗೆ, ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಕಿ ಹುರಿದುಕೊಳ್ಳಿ.
- ಬಳಿಕ ಅದಕ್ಕೆ ರುಬ್ಬಿದ ಪೇಸ್ಟ್ ಅನ್ನು ಸೇರಿಸಿ, 2-3 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.
- ಈಗ ಅದಕ್ಕೆ ನೀರು ಸೇರಿಸಿ, ಕುದಿಸಿ.
- ಬಳಿಕ ಅಕ್ಕಿ ಸೇರಿಸಿ, ಬಹುತೇಕ ನೀರು ಆವಿಯಾಗುವವರೆಗೆ ಕುದಿಸಿಕೊಳ್ಳಿ.
- ಅಕ್ಕಿಯಲ್ಲಿ ಸ್ವಲ್ಪ ನೀರು ಉಳಿದಾಗ ಕುಕ್ಕರ್ ಮುಚ್ಚಳ ಮುಚ್ಚಿ, 5 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಉರಿಯನ್ನು ಆಫ್ ಮಾಡಿ. (ಸೀಟಿ ಹೊಡೆಯಲು ಬಿಡಬೇಡಿ)
- ಕೊನೆಯಲ್ಲಿ ಪುದೀನಾ ಹಾಗೂ ಗೋಡಂಬಿಯಿಂದ ಅಲಂಕರಿಸಿದರೆ ಕೊಕೊನಟ್, ಮಿಂಟ್ ರೈಸ್ ಸವಿಯಲು ಸಿದ್ಧವಾಗುತ್ತದೆ.