ಕೊಡಗು:ಕೊಡಗು ಪೊಲೀಸರ ನೆಚ್ಚಿನ ಗಂಡು ಶ್ವಾನ ‘ಲಿಯೋ’ ನಿಧನ ಹೊಂದಿದೆ.11 ವರ್ಷ ಕಾಲ ಶ್ವಾನ ದಳದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದು ಅನಾರೋಗ್ಯದಿಂದ ಗುರುವಾರದಂದು ಕೊನೆಯುಸಿರು ಎಳೆದಿದೆ.
ಶ್ವಾನದಳ ಸಿಬ್ಬಂದಿ ಮನಮೋಹನ್ ಗರಡಿಯಲ್ಲಿ ಪಳಗಿದ್ದ ಲಿಯೊ 380 ಕ್ಕೂ ಅಧಿಕ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ನಾಡನ್ನೇ ತಲ್ಲಣಗೊಳಿಸಿದ್ದ ಕೊಡಗಿನ ಭೂ ಕುಸಿತ ಸಂದರ್ಭ ನಾಲ್ಕು ಮೃತ ದೇಹ ಪತ್ತೆಹಚ್ಚುವ ಕಾರ್ಯವನ್ನು ಇದು ಮಾಡಿತ್ತು.
ಇನ್ನು ಲಿಯೋ ಕರ್ತವ್ಯ ಪರತೆಗೆ ಐದು ಪದಕ ದೊರೆತಿದೆ.
ಲಿಯೋ ನಿಧನಕ್ಕೆ ಕೊಡಗು ಪೊಲೀಸ್ ಸಿಬ್ಬಂದಿಗಳು ಕಂಬನಿ ಮಿಡಿದಿದ್ದು,ಮಡಿಕೇರಿ ಡಿಆರ್ ಪೊಲೀಸ್ ಆವರಣದಲ್ಲಿ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.
 
				 
         
         
         
															 
                     
                     
                     
                     
                    


































 
    
    
        