ಕೊಬ್ಬರಿ ಖರೀದಿ ಬಗ್ಗೆ ನಿಯಮ ಸರಳೀಕರಣಗೊಳಿಸುವಂತೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ.!

 

ಚಿತ್ರದುರ್ಗ : ಹೊಸದುರ್ಗದಲ್ಲಿ ರೈತರ ಕೊಬ್ಬರಿಯನ್ನು ಈಗಿರುವ ಖರೀದಿಯ ನಿಯಮವನ್ನು ಸರಳೀಕರಣಗೊಳಿಸುವಂತೆ ಒತ್ತಾಯಿಸಿ ರೈತ ಸಂಘ ನಗರದಲ್ಲಿ ಪ್ರತಿಭಟನೆಯನ್ನು ನಡೆಸಿ ಜಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.

ರೈತರ ಕೊಬ್ಬರಿಯನ್ನು ಕೊಳ್ಳಲಾರದಂತೆ ನಿಯಮಗಳನ್ನು ಹೇರಿ ಖರೀದಿಸುವುದು ಸರಿಯಲ್ಲ, ಏಕೆಂದರೆ ಹವಾಮಾನ ಮತ್ತು ಮಳೆಯ ಏರುಪೇರಿನಿಂದಾಗಿ ನುಸಿಬಾದೆ ಮತ್ತು ಕಪ್ಪು ತಲೆಯ ಹುಳುಗಳ ಬಾದೆಯಿಂದ ರೈತರು ತತ್ತರಿಸಿದ್ದಾರೆ.  ಅಂತರ್ಜಲ  ಕುಸಿದು ಹೋಗಿ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಬರಗಾಲದ ಈ ಗಂಭೀರತೆಯಲ್ಲೂ ಅತಾರ್ಕಿಕವಾದ ಮತ್ತು ಕಠಿಣವಾದ ನಿಯಮಗಳನ್ನು ಹೇರಿ ಖರೀದಿಸುವುದು ಸರಿಯಲ್ಲ. ಈ ನಿಯಮಗಳಿಂದಾಗಿ ರೈತರು ಅರ್ಧದಷ್ಟು ಕೊಬ್ಬರಿಯು ಸಹ ಮಾರಾಟವಾಗುವುದಿಲ್ಲ ಎಂದಿದ್ದಾರೆ.

Advertisement

ಕೆಲವು ವರ್ತಕರು ರೈತರಿಂದ ಕೊಬ್ಬರಿಯನ್ನು ಖರೀದಿ ಮಾಡಿ ರೈತರ ಎಫ್.ಐ.ಡಿ. ಯನ್ನು ಬಳಸಿಕೊಂಡು ಮಾರಾಟ ಮಾಡುತ್ತಿದ್ದಾರೆ ಇದರ ಒಳತಂತ್ರಗಳನ್ನು ಗುರುತಿಸಿ ಖರೀದಿಸಬಾರದು  ರೈತರಲ್ಲಿ ಇರುವ ಕೊಬ್ಬರಿಯನ್ನು ಸಂಪೂರ್ಣವಾಗಿ ಖರೀದಿಸಬೇಕು 75 ಎಂ.ಎಂ. ಗಾತ್ರವನ್ನು ತೆಗೆದುಹಾಕಿ ಗುಣಮಟ್ಟದ ಎಲ್ಲಾ ಕೊಬ್ಬರಿಯನ್ನು ಖರೀದಿಸಬೇಕು. ಹಮಾಲಿಗಳ ವಸೂಲಾತಿಯನ್ನು ನಿಲ್ಲಿಸಿ ಕಿರುಕುಳ ತಪ್ಪಿಸಬೇಕು. ಪ್ರತಿದಿನ ಎಷ್ಟು ಮತ್ತು ಯಾವ ಯಾವ ರೈತರ ಕೊಬ್ಬರಿ ಖರೀದಿಸಲಾಗುತ್ತದೆ ಮತ್ತು ಸಮಯವನ್ನು ಪ್ರಕಟಿಸಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ರೈತರ ತೋಟಗಳಲ್ಲಿ ಕೇಬಲ್, ಸ್ಟಾಟರ್ ಮೋಟಾರ್ಗಳು ಕಳ್ಳತನವಾಗುತ್ತಿದ್ದು ಮತ್ತು ತೋಟಗಳಲ್ಲಿ ಇರುವ ಒಂಟಿ ಮನೆಗಳ ಮಹಿಳೆಯರ ಸರಗಳ್ಳತನ ನಡೆಯುತ್ತಿದ್ದು  ಇದನ್ನು ಜಿಲ್ಲಾ ಆಡಳಿತ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವುದು ಮತ್ತು ರಕ್ಷಣೆ ನೀಡುವುದೆಂದು ಒತ್ತಾಯಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯ ಅಧ್ಯಕ್ಷರಾದ ಸಿದ್ಧವೀರಪ್ಪನವರು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಹೊಸದುರ್ಗ ತಾಲೂಕ್ ಅಧ್ಯಕ್ಷರು ಬೋರೇಶ ಅರಲಹಳ್ಳಿ ಪ್ರಧಾನ ಕಾರ್ಯದರ್ಶಿ ಶಶಿಧರ ಹರೇನಹಳ್ಳಿ ಹೊಸದುರ್ಗ ಮಂಜುನಾಥ್ ಚಿತ್ರದುರ್ಗ ತಾಲೂಕ ಅಧ್ಯಕ್ಷರು ಮತ್ತು ಹೊಸದುರ್ಗ ತಾಲೂಕಿನ  ಬೈಲಪ್ಪ ಕುಮಾರಣ್ಣ ಮುರುಗಪ್ಪ ಚಿತ್ತಪ್ಪ ಕೆ ಸಿ ಮಹೇಶ್ವರಪ್ಪ ಕರಿಬಸಪ್ಪ ಅಣ್ಣಪ್ಪ ಹಾಗೂ  ತಾಲೂಕಿನ ಎಲ್ಲ ಘಟಕದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು  ರೈತ ಮುಖಂಡರು  ಹಾಗೂ ರೈತರು ಭಾಗಿಯಾಗಿದ್ದರು ಕಲ್ಲೇಶ್.ಸದಾಶಿವ ಸಿದ್ದೇಶ್ ರಾಮಣ್ಣ ಭರತ್ ನಾಗರಾಜ್ ರೆಡ್ಡಿ ಸದಾಶಿವಪ್ಪ ಪಿ ಬಿ ಭಾಗವಹಿಸಿದ್ದರು

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement