ಬೆಂಗಳೂರು: ಆತ ಸ್ಯಾಂಡಲ್‌ವುಡ್‌ನ ಸಿನಿಮಾದಲ್ಲಿ ಅಂತ ಬ್ಯುಸಿಯಾಗಿದ್ದ. ಸ್ಯಾಂಡಲ್‌ವುಡ್ ಮಾತ್ರಲ್ಲದೆ ಕಾಲಿವುಡ್‌ನಲ್ಲೂ ಒಂದೆರಡು ಸಿನಿಮಾ ಮಾಡಿ ಬಂದಿದ್ದ. ಸಿನಿಮಾ ಅಂತ ಆರಾಮಾಗಿ ಇದ್ದ ನಿರ್ದೇಶಕನಿಗೆ ಸಿಸಿಬಿ ಅಧಿಕಾರಿಗಳು ವಿಲನ್‌ಗಳಾಗಿದ್ದಾರೆ. ಇದಕ್ಕೆ ಕಾರಣ 20 ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣ. ಕೊಲೆ ಕೇಸ್‌ನಲ್ಲಿ 20 ವರ್ಷಗಳಿಂದ ನ್ಯಾಯಾಲಯಕ್ಕೂ ಹಾಜರಾಗದೆ ಪೊಲೀಸರ ಕೈಗೂ ಸಿಗದೆ ಓಡಾಡಿಕೊಂಡಿದ್ದ ಸ್ಯಾಂಡಲ್‌ವುಡ್ ಸಿನಿ ನಿರ್ದೇಶಕ ಗಜೇಂದ್ರ ಅಲಿಯಾಸ್ ಗಜನನ್ನು ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ. 2004ರಲ್ಲಿ ವಿಲ್ಸನ್ ಗಾರ್ಡನ್‌ನಲ್ಲಿ ರೌಡಿ ಶೀಟರ್ ಕೊತ್ತರವಿ ಕೊಲೆಯಾಗಿತ್ತು. ಈ ಕೇಸ್‌ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ಗಜೇಂದ್ರ A8 ಆಗಿದ್ದ. ಒಂದು ವರ್ಷ ಜೈಲು ಮುಗಿಸಿ ನಂತರ ಕೋರ್ಟ್ ಹಾಜರಾಗಿರಲಿಲ್ಲ. ಅರಸಯ್ಯನ ಶಿಷ್ಯ ಗಜೇಂದ್ರ ಪುಟಾಣಿ ಪವರ್, ರುದ್ರ ಸಿನಿಮಾ ಡೈರೆಕ್ಷನ್ ಮಾಡಿದ್ದನಂತೆ. ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಹೇಳಿಕೊಂಡಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಗಜೇಂದ್ರನನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.