ಹರಿಯಾಣ: ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಪರೀಕ್ಷೆಯನ್ನು ಯಾವುದೇ ಕೋಚಿಂಗ್ ಇಲ್ಲದೆ ಸ್ವಪ್ರಯತ್ನದಿಂದ ಪಾಸ್ ಮಾಡಿದ ಸಾಧಕಿ ತೇಜಸ್ವಿ ರಾಣಾ ಅವರ ಸ್ಪೂರ್ತಿಯ ಕಥೆ ಇದಾಗಿದೆ.ಪ್ರತಿ ವರ್ಷ ಸಾವಿರಾರು ಆಕಾಂಕ್ಷಿಗಳು ಹಲವು ತಿಂಗಳ ಪರಿಶ್ರಮ, ಅಭ್ಯಾಸದಿಂದಾಗಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಕೆಲವರು ಕೋಚಿಂಗ್ ಇಲ್ಲದೇ ಪರೀಕ್ಷೆ ಪಾಸ್ ಮಾಡಿದರೆ ಇನ್ನು ಕೆಲವರು ಕೋಚಿಂಗ್ ತೆಗೆದುಕೊಳ್ಳುತ್ತಾರೆ. ಹೀಗೆ ಕೋಚಿಂಗ್ ಇಲ್ಲದೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಅಧಿಕಾರಿಯಾದವರ ಸಾಲಲ್ಲಿ ತೇಜಸ್ವಿ ರಾಣಾ ಒಬ್ಬರಾಗಿದ್ದಾರೆ.ಹರಿಯಾಣದ ಕುರುಕ್ಷೇತ್ರದರಾದ ತೇಜಸ್ವಿ ಅವರು ತನ್ನ ಶಾಲಾ ದಿನಗಳಿಂದಲೂ ತುಂಬಾ ಉತ್ತಮ ವಿದ್ಯಾರ್ಥಿಯಾಗಿದ್ದರು. ಬಾಲ್ಯದಿಂದಲೂ ಎಂಜಿನಿಯರಿಂಗ್ ಓದುವುದು ಇವರ ಕನಸಾಗಿತ್ತು. ಆದ್ದರಿಂದ ಜೆಇಇ ಪರೀಕ್ಷೆಗಳನ್ನು ತೆಗೆದುಕೊಂಡು ಅದರಲ್ಲಿ ಯಶಸ್ವಿಯಾದರು. ಬಳಿಕ ಜೆಇಇ ತೇರ್ಗಡೆಯಾಗಿ ಐಐಟಿ ಕಾನ್ಪುರಕ್ಕೆ ಸೇರಿದ ಅವರಿಗೆ ಯುಪಿಎಸ್‌ಸಿಯಲ್ಲಿ ಆಸಕ್ತಿ ಬೆಳೆಯಿತು.
ಇನ್ನು ಐಎಎಸ್ ಅಧಿಕಾರಿ ಆಗಲೇ ಬೇಕು ಎಂಬ ನಿರ್ಧಾರ ಮಾಡಿಕೊಂಡ ತೇಜಸ್ವಿ ಅಭ್ಯಾಸ ಕ್ರಮವನ್ನು ಆರಂಭಿಸಿದರು. ಉತ್ತರ ಬರೆಯುವುದು, ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮೂಲಕ ಪೂರ್ವಸಿದ್ಧತಾ ಕೆಲಸವನ್ನು ಮೌಲ್ಯಮಾಪನ ಮಾಡಿದರು. ಅಂತರ್ಜಾಲವನ್ನು ಬಳಸಿಕೊಂಡು ತಮ್ಮದೇ ನೋಟ್ಸ್‌ಗಳನ್ನು ಸಹ ತಯಾರಿಸಿಕೊಂಡರು.
2015 ರಲ್ಲಿ ಮೊದಲ ಬಾರಿಗೆ ತೇಜಸ್ವಿ ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಂಡರು. ಆದರೆ ಮೊದಲ ಪ್ರಯತ್ನದಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದರೂ, ಅವರು ಮೇನ್ಸ್ ಅನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಈ ಸೋಲಿನಿಂದ ಕಂಗೆಡದ ಅವರು ದೃಢವಾಗಿ ಮತ್ತೆ ತಯಾರಿ ಆರಂಭಿಸಿದರು.
ಇನ್ನು ಎರಡನೇ ಬಾರಿಗೆ ಪರೀಕ್ಷೆ ತೆಗೆದುಕೊಂಡು ತನ್ನ ಪರಿಶ್ರಮದ ಫಲವಾಗಿ 2016 ರಲ್ಲಿ AIR12 ಅನ್ನು ಪಡೆದುಕೊಂಡಿದ್ದಾರೆ. ತೇಜಸ್ವಿ ರಾಣಾ ಐಪಿಎಸ್ ಅಧಿಕಾರಿ ಅಭಿಷೇಕ್ ಗುಪ್ತಾ ಅವರನ್ನು ಮದುವೆಯಾಗಿದ್ದಾರೆ.