ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ ಸಿಎಸ್ಕೆ ಹೀನಾಯ ಸೋಲು ಅನುಭವಿಸಿತು. ಚೆನ್ನೈ ನೀಡಿದ 211 ಬೃಹತ್ ಗುರಿಯನ್ನು ಬೆನ್ನಟ್ಟಿದ ಲಕ್ನೋ ಪಡೆಗೆ ಆಸರೆಯಾದ ಮಾರ್ಕಸ್ ಸ್ಟೋಯಿನಿಸ್ ಬ್ಯಾಟಿಂಗ್ ಆರ್ಭಟಕ್ಕೆ ರುತುರಾಜ್ ಪಡೆ ತತ್ತರಿಸಿ ಹೋಯಿತು.
ಈ ಮೂಲಕ ಸತತ ಎರಡನೇ ಬಾರಿ ಒಂದೇ ತಂಡದ ಎದುರು ಸೋತು ಸುಣ್ಣವಾಯಿತು.
ನಿನ್ನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬ್ಯಾಟಿಂಗ್ ವೇಳೆ ಮೊದಲ ಇನ್ನಿಂಗ್ಸ್ನ ಕಡೆಯ ಓವರ್ನ ಎರಡು ಬಾಲ್ ಇದ್ದಾಗ ಕ್ರೀಸ್ಗೆ ಬಂದ ಸಿಎಸ್ಕೆ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಓವರ್ನ ಕಡೆಯ ಬಾಲ್ಗೆ ಫೋರ್ ಹೊಡೆದು ಡ್ರೆಸ್ಸಿಂಗ್ ರೂಮ್ನತ್ತ ಸಾಗಿದರು. ಈ ಪಂದ್ಯದಲ್ಲಿ ಮಾಹಿ ಎದುರಿಸಿದ್ದು ಕೇವಲ ಒಂದೇ ಒಂದು ಬಾಲ್ ಆದರೂ ನೆರದಿದ್ದ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾದರು. ಈ ಸಮಯದಲ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಮಾಹಿ ಬಳಿ ಕ್ಯಾಮರಾಮನ್ ಜೂಮ್ ಮಾಡಿದರು. ಇದನ್ನು ಗಮನಿಸಿದ ಮಾಹಿ ಕುಡಿಯುವ ನೀರಿನ ಬಾಟಲಿ ಎಸೆದಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಇಡೀ ಸಿಎಸ್ಕೆ ಪಂದ್ಯದಲ್ಲಿ ಹೆಚ್ಚಾಗಿ ಧೋನಿಯನ್ನೇ ಸೆರೆಹಿಡಿಯುವ ಕ್ಯಾಮರಾಮನ್ಗಳು ಅಭಿಮಾನಿಗಳನ್ನು ಖುಷಿಪಡಿಸಲು ಮಾಹಿ ಡ್ರೆಸ್ಸಿಂಗ್ ರೂಮ್ನಲ್ಲಿದ್ದಾಗಲೆಲ್ಲಾ ಅವರನ್ನೇ ಹೆಚ್ಚು ತೋರಿಸುತ್ತಾರೆ. ಪಂದ್ಯದ ಪೂರ ಧೋನಿ ಮಯವೇ ಆದ ಕಾರಣ, ಇದು ಕ್ಯಾಪ್ಟನ್ ಕೂಲ್ಗೂ ಸಹ ಒಂದು ರೀತಿ ಬೇಸರ ಆದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಇದೇ ಕಾರಣಕ್ಕೆ ಅವರು ಬಾಟಲ್ ಎಸೆದಿರಬಹುದು. ಆದರೆ, ಮಾಜಿ ಕ್ಯಾಪ್ಟನ್ ಬಾಟಲ್ ಎಸೆದಿರುವ ವಿಡಿಯೋ ಮಾತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದು ತನ್ನನ್ನೇ ಪದೇ ಪದೇ ತೋರಿಸುವ ಕ್ಯಾಮರಾಮನ್ಗೆ ಧೋನಿ ಹಾಸ್ಯಸ್ಪದವಾಗಿ ಎಚ್ಚರಿಸಿದಂತಿದೆ. ತಮ್ಮ ನೆಚ್ಚಿನ ಕ್ಯಾಪ್ಟನ್ ಏನು ಮಾಡಿದ್ರು ಅದು ಅಭಿಮಾನಿಗಳಿಗೆ ಖುಷಿಯಾಗಿ ಪರಿಣಮಿಸಲಿದೆಯೇ ಹೊರತು ಬೇರೇನೂ ಆಗಲು ಸಾಧ್ಯವಿಲ್ಲ. ಸದ್ಯ ಈ ವಿಡಿಯೋ ನೋಡಿದ ಧೋನಿ ಅಭಿಮಾನಿಗಳು ತಲಾ ಫಾರ್ ಎ ರೀಸನ್ ಎಂದು ಕಮೆಂಟ್ ಮಾಡಿದ್ದಾರೆ,