‘ಖತಮ್-ಟಾಟಾ, ಬೈ-ಬೈ’ ಫೇಮಸ್ ಮೀಮ್ಸ್ ಗೆ ರಾಹುಲ್ ರಿಯಾಕ್ಷನ್ ಏನು?

ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೈಪುರದ ಮಹಾರಾಣಿ ಕಾಲೇಜಿಗೆ ಭೇಟಿ ಸಂವಾದ ನೀಡಿದ್ದರು. ಈ ವೇಳೆ ರಾಹುಲ್ ವಿದ್ಯಾರ್ಥಿನಿಯ ಸ್ಕೂಟಿ ಏರಿ ಸಹ ಸವಾರನಾಗಿ ಪ್ರಯಾಣಿಸಿದ್ದು ಸುದ್ದಿಯಾಗಿತ್ತು.

ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಕೆಲಕಾಲ ಸಂವಾದ ನಡೆಸಿದ್ದ ತುಣುಕುಗಳನ್ನು ಇದೀಗ ರಾಹುಲ್ ಗಾಂಧಿ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ವೇಳೆ ವಿದ್ಯಾರ್ಥಿನಿಯೊಬ್ಬರು “ನಿಮ್ಮ ಫೇಮಸ್ ಮೀಮ್ಸ್ ಖತಮ್-ಟಾಟಾ, ಬೈ-ಬೈ ಬಗ್ಗೆ ಏನು ಹೇಳ್ತೀರಾ?” ಎಂದು ಪ್ರಶ್ನಿಸಿದ್ದು, ಇದಕ್ಕೆ ನಗು ನಗುತ್ತಾ ಉತ್ತರಿಸಿದ ರಾಹುಲ್ “ಕೆಲವೊಮ್ಮ ಹೇಳಬೇಕಾಗುತ್ತದೆ” ( ಕಭಿ ಕಭಿ ಕೆಹೆನಾ ಪಡ್ತಾಹೇ) ಎಂದು ಹೇಳಿದ್ದಾರೆ.

Advertisement

ಮತ್ತೋರ್ವ ವಿದ್ಯಾರ್ಥಿನಿ ರಾಹುಲ್ ಅವರ ಸ್ಕೀನ್ ಕೇರ್ ಹೇಗಿರುತ್ತೆ ಎಂದು ಪ್ರಶ್ನಿಸಿದ್ದು, ಈ ವೇಳೆ ರಾಹುಲ್ ತಾನು ಯಾವುದೇ ಸಾಬೂನು, ಕ್ರೀಮ್ ಮುಖಕ್ಕೆ ಬಳಸುವುದಿಲ್ಲ, ಕೇವಲ ನೀರಿನ ಮುಖ ತೊಳೆಯುತ್ತೇನೆ ಎಂದು ಹೇಳಿದ್ದಾರೆ. ತಮ್ಮ ನೆಚ್ಚಿನ ಆಹಾರ , ಇಷ್ಟದ ಪ್ರವಾಸಿ ತಾಣ , ಮದುವೆ, ಕಾಲೇಜು ಕ್ರಶ್ ಇತ್ಯಾದಿ ವಿಷಯಗಳ ಬಗ್ಗೆಯೂ ವಿದ್ಯಾರ್ಥಿನಿಯರ ಪ್ರಶ್ನೆಗೆ ಉತ್ತರಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement