ಕೆಲವರು ಬರೀ ಹೊಟ್ಟೆಗೆ ಹಾಲನ್ನು ಕುಡಿಯುತ್ತಾರೆ. ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯಬಹುದೇ..? ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಎನ್ನುವುದನ್ನು ತಿಳಿಯೋಣ.
ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ ಮತ್ತು ಆಮ್ಲೀಯತೆ ಉಂಟಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವ ಅಭ್ಯಾಸವಿರುವವರು ಬಿಸಿಯಾಗಿ ಸೇವಿಸುವುದಕ್ಕಿಂತ ತಣ್ಣನೆಯ ಹಾಲನ್ನು
ಕುಡಿಯಬೇಕು ಇದರಿಂದ ನಿಮ್ಮ ಹೊಟ್ಟೆಯಲ್ಲಿ ಅಸಿಡಿಟಿ ಉಂಟಾಗುವುದಿಲ್ಲ. ಏನಾದರೂ ತಿಂದ ನಂತರವೇ ಹಾಲು ಕುಡಿಯಿರಿ.
ಕಡಿಮೆ ಕೊಬ್ಬಿನ ಅಥವಾ ಕೆನೆರಹಿತ ಹಾಲು ಆರೋಗ್ಯಕ್ಕೆ ಒಳ್ಳೆಯದು.