ಮುಂಬೈ:ವಿಜಯ್ ದೇವರಕೊಂಡ , ಸಮಂತಾ ರುತ್ ಪ್ರಭು ಅಭಿನಯದ ‘ಖುಷಿ’ ಸಿನಿಮಾ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿದೆ. ಸಿನಿಮಾ 4ನೇ ದಿನಕ್ಕೆ 75 ಕೋಟಿ ರೂಪಾಯಿ ಬಾಚಿಕೊಂಡಿದೆ. ಸತತ ಸೋಲು ಕಾಣುತ್ತಿದ್ದ ವಿಜಯ್ ಈ ಸಿನಿಮಾದಿಂದ ಗೆಲುವಿನ ನಗೆ ಬೀರಿದ್ದಾರೆ. ಇದರ ಬೆನ್ನಲೇ ಖುಷಿ ವಿಚಾರವೊಂದನ್ನು ದೇವರಕೊಂಡ ಹಂಚಿಕೊಂಡಿದ್ದಾರೆ.
ಖುಷಿ’ ಸಿನಿಮಾದ ಯಶಸ್ಸಿನಿಂದ ಫುಲ್ ಖುಷ್ ಆದ ವಿಜಯ ದೇವರಕೊಂಡ ಒಂದು ಕೋಟಿ ರೂಪಾಯಿ ದಾನ ಮಾಡುವುದಾಗಿ ಹೇಳಿದ್ದಾರೆ. ಈ ಸಿನಿಮಾದ ಸಂಭಾವನೆಯಲ್ಲಿ ಒಂದು ಕೋಟಿ ರೂಪಾಯಿ ಹಣವನ್ನು ದಾನ ಮಾಡುತ್ತೇನೆ ಎಂದಿದ್ದಾರೆ.
100 ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಚೆಕ್ ನೀಡುವುದಾಗಿ ಘೋಷಿಸಿದ್ದಾರೆ. ಸೋಮವಾರ ವಿಶಾಖಪಟ್ಟಣಂನಲ್ಲಿ ನಡೆದ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಈ ಕುರಿತು ಮಾತನಾಡಿದ್ದು, ಈ ಖುಷಿಯನ್ನು ಹೆಚ್ಚಿಸಲು ನಾನು ‘ಖುಷಿ’ ಸಿನಿಮಾದ ಸಂಭಾವನೆಯಲ್ಲಿ ಒಂದು ಕೋಟಿ ರೂಪಾಯಿಯನ್ನು ಅಗತ್ಯವಿರುವ ಕುಟುಂಬಗಳಿಗೆ ನೀಡುತ್ತೇನೆ. ಮುಂದಿನ ಹತ್ತು ದಿನಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುತ್ತೇನೆ. ನನ್ನ ಯಶಸ್ಸು, ನನ್ನ ಸಂತೋಷ, ನನ್ನ ಸಂಬಳವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ.
‘ಸ್ಪ್ರೆಡ್ಡಿಂಗ್ ಖುಷಿ ಅಥವಾ ದೇವರ ಫ್ಯಾಮಿಲಿ ಎಂಬ ಹೆಸರಿನಲ್ಲಿ ಬುಧವಾರ ಇನ್ಸ್ಟಾಗ್ರಾಂ ಮೂಲಕ ಫಾರ್ಮ್ ಹಂಚಿಕೊಳ್ಳುತ್ತೇನೆ. ಇದರ ಮೂಲಕ ಅಗತ್ಯವಿರುವವರು ನಿಮ್ಮ ಹೆಸರನ್ನು ನಮೂದಿಸಬಹುದು. ಮನೆ ಬಾಡಿಗೆ, ಮಕ್ಕಳ ಶಾಲಾ ಫೀಸ್ ಹೀಗೆ ಯಾವುದೇ ವಿಷಯಕ್ಕೆ ಹಣ ಬಳಕೆಯಾದರೂ ನನಗೆ ಸಂತೋಷವಾಗುತ್ತದೆ ಎಂದರು.