ಖ್ಯಾತ ಚಿತ್ರನಟ ಅಜಿತ್ ಕುಮಾರ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದ ಶೂಟಿಂಗ್ ವೇಳೆ ಅಜಿತ್ ದೇಹ ಸಹಕರಿಸದ ಕಾರಣ ಸಾಮಾನ್ಯ ದೈಹಿಕ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.
ಸದ್ಯ ಅವರು ಮಾಗಿಜ್ ತಿರುಮೇನಿ ನಿರ್ದೇಶನದ ‘ವಿಡಮುಯಾರ್ಚಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ನಡೆಯುತ್ತಿದ್ದು,
ಕಳೆದ ಕೆಲ ದಿನಗಳಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.