ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬಹುಭಾಷಾ ಸಂಗೀತ ನಿರ್ದೇಶಕ ವಿಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಜಯ್ ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಿಜಯ್ 1982 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಕನ್ನಡ ಮತ್ತು ತಮಿಳು ಮಾತ್ರವಲ್ಲದೆ ತೆಲುಗು ಮಲಿಯಾಳಂ ಚಿತ್ರಗಳಿಗೂ ತಮ್ಮ ಸಂಗೀತವನ್ನು ನೀಡಿದ್ದರು. ವಿಜಯ್ ಅವರ ಸಂಗೀತವನ್ನು ದಕ್ಷಿಣದ ಸೂಪರ್ ಸ್ಟಾರ್ ಗಳ ಚಿತ್ರಗಳಲ್ಲಿಯೂ ಬಳಸಲಾಗಿದೆ.
1986 ರಲ್ಲಿ ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ನಾನ್ ಆದಿಮೈ ಇಲೈ’ ಮತ್ತು ‘ಒರು ಜೀವಂತನ್’ ಚಿತ್ರಗಳಿಗೆ ವಿಜಯ್ ಸಂಗೀತ ನೀಡಿದ್ದರು. ಇದು ತುಂಬಾ ಪ್ರಸಿದ್ಧವಾಗಿದೆ ಮತ್ತು ಜನರು ಸಹ ಇದನ್ನು ತುಂಬಾ ಇಷ್ಟಪಡುತ್ತಾರೆ. ಅಲ್ಲದೇ ವಿಜಯ್ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಕನ್ನಡ ಚಲನಚಿತ್ರೋದ್ಯಮವನ್ನು ಆಳಿದ್ದರು. ಇಳಯರಾಜರಂಥ ದಿಗ್ಗಜರ ಮಧ್ಯೆಯೂ ತಮ್ಮ ತನವನ್ನು ವಿಜಯ್ ಉಳಿಸಿಕೊಂಡು ಬಂದಿದ್ದರು. ವಿಜಯ್ ನಿಧನಕ್ಕೆ ಸಂಗೀತ ಕ್ಷೇತ್ರ ಕೂಡ ಕಂಬನಿ ಮಿಡಿದಿದೆ.