ಮಧ್ಯಪ್ರದೇಶ :ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಸವಿತಾ ಪ್ರಧಾನ್ ಇಂದಿನ ಯುಪಿಎಸ್ ಸಿ ಪರೀಕ್ಷಾ ಸಾಧಕರ ಅತಿಥಿ.
ಎರಡು ಮಕ್ಕಳ ತಾಯಿಯಾಗಿರುವ ಸವಿತಾ ಪ್ರಧಾನ್ ಅವರಿಗೆ ಐಎಎಸ್ ಅಧಿಕಾರಿಯಾಗುವುದು ಅಷ್ಟು ಸುಲಭವಾಗಿರಲಿಲ್ಲ. ಅವರ ಜೀವನದಲ್ಲಿ ಹಲವು ಏರಿಳಿತಗಳಿದ್ದವು. ವಿದ್ಯಾಭ್ಯಾಸದಿಂದ ಹಿಡಿದು ದಾಂಪತ್ಯ ಜೀವನದವರೆಗೆ ಸಾಕಷ್ಟು ಕಷ್ಟ ಗಳನ್ನು ಎದುರಿಸಿದ್ದಾರೆ. ಅವರು ಪ್ರಸ್ತುತ ಗ್ವಾಲಿಯರ್ ವಿಭಾಗದಲ್ಲಿ ಜಂಟಿ ನಿರ್ದೇಶಕರಾಗಿದ್ದಾರೆ. 2021 ರಲ್ಲಿ, ಅವರು ಖಾಂಡ್ವಾ ಮುನ್ಸಿಪಲ್ ಕಾರ್ಪೊರೇಶನ್ ನ ಮೊದಲ ಮಹಿಳಾ ಆಯುಕ್ತರಾದರು.
ಸವಿತಾ ಪ್ರಧಾನ್ ಅವರು ಸಂಸದೀಯ ಮಂಡಿ ಎಂಬ ಹಳ್ಳಿಯಲ್ಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಅತ್ಯಂತ ಬಡತನದಲ್ಲಿ ಬೆಳೆದವರು. ಆಗ ಅವರ ಗ್ರಾಮದಲ್ಲಿ 10ನೇ ತರಗತಿವರೆಗೆ ಮಾತ್ರ ಶಾಲೆ ಇತ್ತು. ಹೆಚ್ಚಿನ ಹುಡುಗಿಯರನ್ನು ಓದಲು ಕಳುಹಿಸುತ್ತಿರಲಿಲ್ಲ. ತನ್ನ ಹಳ್ಳಿಯಿಂದ 10ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ಹುಡುಗಿ ಸವಿತಾ ಆಗಿದ್ದರು.
ಸೆಕೆಂಡ್ ಪಿಯು ಅಲ್ಲಿ ಜೀವಶಾಸ್ತ್ರ ಅಧ್ಯಯನ ಮಾಡಿದರು. ಅದಕ್ಕೇ ಸವಿತಾ ಅವರನ್ನು ಮದುವೆ ಆಗಲು ದೊಡ್ಡಮನೆಯ ಸಂಬಂಧ ಬಂದಿತ್ತು. 16-17 ನೇ ವಯಸ್ಸಿನಲ್ಲಿ ಸವಿತಾ ಅವರ ಇಚ್ಛೆಗೆ ವಿರುದ್ಧವಾಗಿ ಮದುವೆ ಆಯಿತು. ಸವಿತಾ ಪ್ರಧಾನ್ ಅವರ ವೈವಾಹಿಕ ಜೀವನ ಕಷ್ಟಗಳಿಂದ ಕೂಡಿತ್ತು. ಅತ್ತೆ ಆಕೆಯನ್ನು ಸಾಕಷ್ಟು ಹಿಂಸಿಸುತ್ತಿದ್ದರು. ಆಕೆಯ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು.
ಗರ್ಭಿಣಿಯಾದ ನಂತರವೂ ಆಕೆಯ ಮೇಲಿನ ದೌರ್ಜನ್ಯ ನಿಂತಿಲ್ಲ. ಎರಡನೇ ಮಗ ಹುಟ್ಟಿದ ನಂತರವೂ ಪತಿ ಆಕೆಗೆ ಥಳಿಸುತ್ತಲೇ ಇದ್ದರಂತೆ. ಇದರಿಂದ ಬೇಸತ್ತ ಸವಿತಾ ಆತ್ಮಹತ್ಯೆಗೆ ಯತ್ನಿಸಿದರು ಆದರೆ ಅತ್ತೆ ಬಂದು ತಡೆಯಲಿಲ್ಲ. ಆಗ ತಾನು ಸಾಯುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಸವಿತಾ ಬಂದರು.
ಮಕ್ಕಳೊಂದಿಗೆ ಅತ್ತೆಯ ಮನೆಯನ್ನು ತೊರೆದ ಸವಿತಾ ಪಾರ್ಲರ್ ನಲ್ಲಿ ಕೆಲಸ ಮಾಡುವುದರ ಜೊತೆಗೆ ಮತ್ತೆ ಓದಲು ಪ್ರಾರಂಭಿಸಿದರು. ಇಂದೋರ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಸರ್ಕಾರಿ ಕೆಲಸಕ್ಕೆ ಸೇರಿದ ನಂತರ ಸವಿತಾ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದರು. ಇಂದು ಅನ್ಯಾಯಕ್ಕೊಳಗಾದ ಅನೇಕರಿಗೆ ಸವಿತಾ ದಾರಿದೀಪವಾಗಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ