ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ ಡಿಕ್ರೂಜ್​: ಹುಟ್ಟಿದ ತಕ್ಷಣ ನಾಮಕರಣ…

ಬಾಲಿವುಡ್​ ನಟಿ ಇಲಿಯಾನಾ ಡಿಕ್ರೂಜ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಗಸ್ಟ್​ 1 ರಂದು ಮಗು ಜನಿಸಿದ್ದು, ಈ ಸಂತಸದ ವಿಚಾರವನ್ನು ನಟಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಬಹುತೇಕ ಸೆಲೆಬ್ರಿಟಿಗಳು ಕೆಲವು ತಿಂಗಳವರೆಗೆ ತಮ್ಮ ಮಗುವಿನ ಮುಖವನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಆದರೆ ಇಲಿಯಾನಾ ಡಿಕ್ರೂಜ್​ ಇದಕ್ಕೆ ವಿರುದ್ಧವಾಗಿದ್ದಾರೆ. ಅವರು ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮಗುವಿನ ಹೆಸರು ‘ಕೋವಾ ಫೀನಿಕ್ಸ್​ ಡೋಲನ್​’ ಎಂದು ಘೋಷಿಸಿದ್ದಾರೆ.

“ನಮ್ಮ ಮುದ್ದು ಮಗನನ್ನು ಈ ಜಗತ್ತಿಗೆ ಸ್ವಾಗತಿಸಲು ನಾವು ಬಹಳ ಸಂತೋಷಪಡುತ್ತೇವೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ” ಎಂದು ಮಗುವಿನ ಫೋಟೋ ಹಂಚಿಕೊಂಡಿರುವ ಇಲಿಯಾನಾ ಕ್ಯಾಪ್ಶನ್​ ನೀಡಿದ್ದಾರೆ. ಸೋಷಿಯಲ್​ ಮೀಡಿಯಾ ಬಳಕೆದಾರರು, ನಟಿಯ ಅಭಿಮಾನಿಗಳು ಕಮೆಂಟ್​ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಮಗುವಿನ ಫೋಟೋವನ್ನು ಬಹಿರಂಗಪಡಿಸಿದ್ದಕ್ಕಾಗಿ ಫ್ಯಾನ್ಸ್​ ಖುಷಿಯಾಗಿದ್ದಾರೆ.

Advertisement

ಎರಡು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ಇಲಿಯಾನಾ ಡಿಕ್ರೂಜ್,​ ಏಪ್ರಿಲ್​ 18 ರಂದು ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿ, ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಬಳಿಕ ಬೇಬಿ ಬಂಪ್​ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಕಳೆದ ತಿಂಗಳವರೆಗೂ ಮಗುವಿನ ತಂದೆಯ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಬಹಿರಂಗವಾಗಿ ಗೆಳೆಯನ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ.

ಈ ಹಿಂದೆ ಇಲಿಯಾನ ಬಾಲಿವುಡ್​ ನಟಿ ಕತ್ರಿನಾ ಕೈಫ್​ ಅವರ ಸಹೋದರ ಸೆಬಸ್ಟಿಯನ್​ ಲ್ಯೂರೆಂಟ್​ ಮಿಷೆಲ್​ ಜೊತೆಗೆ ಡೇಟಿಂಗ್​ ನಡೆಸಿದ್ದರು. ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಹಲವು ಸ್ನೇಹಿತರೊಂದಿಗೆ ಮಾಲ್ಡೀವ್ಸ್​​ಗೆ ಹಾರಿದಾಗ ಇವರ ಜೊತೆ ಇಲಿಯಾನ ಕೂಡ ಪ್ರಯಾಣ ನಡೆಸಿದ್ದರು. ನಂತರ ಈ ಇಬ್ಬರೂ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೂ ಮೊದಲು ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್​ ಅವರೊಂದಿಗೆ ಕೆಲ ವರ್ಷಗಳ ಕಾಲ ನಟಿ ಡೇಟಿಂಗ್​ ನಡೆಸಿದ್ದರು. ಹೀಗಾಗಿ ಇಲಿಯಾನಾ ಫ್ಯಾನ್ಸ್​, ಮಗುವಿನ ತಂದೆ ಕತ್ರಿನಾ ಕೈಫ್​ ಸಹೋದರ ಎಂದು ಊಹಿಸಿದ್ದರು.

ಆದರೆ ಕಳೆದ ತಿಂಗಳು ಇಲಿಯಾನಾ ತಮ್ಮ ಗೆಳೆಯನ ಫೋಟೋವನ್ನು ಬಹಿರಂಗಪಡಿಸಿದ್ದರು. ‘ಡೇಟ್ ನೈಟ್’ ಎಂಬ ಶೀರ್ಷಿಕೆಯೊಂದಿಗೆ ಮೊದಲ ಬಾರಿ ತಮ್ಮ ಗೆಳೆಯನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಹಾಗಂತ ಇಲಿಯಾನಾ ಅವರ ಹೆಸರನ್ನು ಬಹಿರಂಪಡಿಸಿಲ್ಲ. ಆದರೆ ಕತ್ರಿನಾ ಕೈಫ್​ ಸಹೋದರ ಸೆಬಸ್ಟಿಯನ್​ ಲ್ಯೂರೆಂಟ್​ ಮಿಷೆಲ್ ಅಲ್ಲ ಎಂಬುದಂತೂ ಸ್ಪಷ್ಟವಾಗಿದೆ. ಗೆಳೆಯನ ಹೆಸರನ್ನು ತಿಳಿಸುವಂತೆ ಅಭಿಮಾನಿಗಳು ನಟಿಯಲ್ಲಿ ಕೇಳಿಕೊಂಡಿದ್ದರು. ಆದರೆ ಈ ಬಗ್ಗೆ ಇಲಿಯಾನಾ ಪ್ರತಿಕ್ರಿಯಿಸಿಲ್ಲ.

ಇನ್ನು, ಇವರ ಸಿನಿಮಾ ವಿಚಾರವಾಗಿ ನೋಡುವುದಾದರೆ, ಅವರು ಕೊನೆಯದಾಗಿ ದಿ ಬಿಗ್ ಬುಲ್ ನಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರವನ್ನು ನಿರ್ಮಾಪಕ ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ ಮತ್ತು ಅಜಯ್ ದೇವಗನ್ ನಿರ್ಮಿಸಿದ್ದಾರೆ. ಅವರು ಮುಂದೆ ಅನ್​ಫೇರ್​ ಅಂಡ್​ ಲವ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲ್ವಿಂದರ್ ಸಿಂಗ್ ಜಂಜುವಾ ನಿರ್ದೇಶಿಸಿದ ಈ ಚಿತ್ರವು ಭಾರತದ ಫೇರ್ ಸ್ಕಿನ್‌ನ ಗೀಳಿನ ಮೇಲೆ ಕಾಮಿಕ್ ಟೇಕ್ ಆಗಿದೆ. ಈ ಚಿತ್ರವು ಹರಿಯಾಣದ ಹಿನ್ನೆಲೆಯಲ್ಲಿದೆ ಮತ್ತು ರಣದೀಪ್ ಹೂಡಾ ಅವರೊಂದಿಗೆ ನಟಿ ಇಲಿಯಾನಾ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಇನ್ನೂ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿಲ್ಲ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement