ಚಿತ್ರದುರ್ಗ: ಭೀಮಸಮುದ್ರದಲ್ಲಿ ಗಣಿಗಾರಿಕೆಯನ್ನು ಮಾಡಲಾಗುತ್ತಿದ್ದು ಗಣಿ ಅದಿರನ್ನು ಸಾಗಿಸಲು ಲಾರಿಗಳನ್ನು ಬಳಸಾಗುತ್ತಿದೆ, ಇದರಿಂದ ರಸ್ತೆಗಳು ಹಾಳಾಗುವುದ್ದಲ್ಲದೆ ಅಲ್ಲಿನ ಜನರ ಬದುಕು ಹಾಳಾಗಿದೆ, ಈ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಭೀಮಸಮುದ್ರ ಗ್ರಾಮಸ್ಥರು ಹಾಗೂ ರೈತರು, ರಾಜಕೀಯ ಪಕ್ಷದೊಂದಿಗೆ ಸಭೆಯನ್ನು ನಡೆಸಲಾಯಿತು.
ಭೀಮಸಮುದ್ರದಿಂದ ಗಣಿ ಅದಿರನ್ನು ಸಾಗಾಟ ಮಾಡಲು ಕಂಪನಿಗಳು ಲಾರಿಗಳನ್ನು ಬಳಸಲಾಗುತ್ತಿವೆ, ಇದರಿಂದ ಸರ್ಕಾರದವತಯಿಂದ ನಿರ್ಮಾಣ ಮಾಡಲಾದ ರಸ್ತೆಗಳು ಹಾಳಾಗುತ್ತಿವೆ, ಇದ್ದಲ್ಲದೆ ಅದಿರಿನಿಂದ ಬರುವಂತ ಧೂಳಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಆಲ್ಲದೆ ಜಮೀನುಗಳಲ್ಲಿ ಬೆಳೆದ ಬೆಳೆಯೂ ಸಹಾ ಹಾಳಾಗುತ್ತಿದೆ, ಇದರಿಂದ ಬೇಸತ್ತ ಆಲ್ಲಿನ ಜನತೆ ಲಾರಿಗಳ ಓಡಾಟವನ್ನು ತಡೆಯುವುದರ ಮೂಲಕ ಪ್ರತಿಭಟನೆಯನ್ನು ಸಹಾ ನಡೆಸಿದ್ದರು, ಇದಾದ ನಂತರವೂ ಸಹಾ ಲಾರಿಗಳ ಓಡಾಟವನ್ನು ನಿಲ್ಲಿಸಲಿಲ್ಲ ಈ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯನ್ನು ನಡೆಸಿ ಭೀಮಸಮುದ್ರದಿಂದ ಅದಿರು ಸಾಗಾಟವನ್ನು ಲಾರಿಗಳ ಮೂಲಕ ಮಾಡಿಸಬಾರದು ಇದನ್ನು ರೈಲ್ವೆಗಳ ವ್ಯಾಗಿನ್ ಮೂಲಕ ಮಾಡಿಸಿ ಎಂದು ಗ್ರಾಮಸ್ಥರು, ರೈತರು ಪಟ್ಟು ಹಿಡಿದರು, ರೈಲ್ವೆ ವ್ಯಾಗಿನ್ ಮೂಲಕ ಅದಿರನ್ನು ಸಾಗಾಟ ಮಾಡಿಸಿದರೆ ನಮಗೆ ಯಾವ ತೊಂದರೆ ಯಾಗುವುದಿಲ್ಲ ರಸ್ತೆಗಳು ಹಾಳಾಗುವುದಿಲ್ಲ, ಜನರ ಆರೋಗ್ಯವೂ ಸಹಾ ಚನ್ನಾಗಿ ಇರುತ್ತದೆ ಬೆಳೆಗಳಿಗೂ ಸಹಾ ಯಾವ ತೊಂದರೆಯಾಗುವುದಿಲ್ಲ ಸರ್ಕಾರಕ್ಕೂ ಸಹಾ ಆದಾಯ ಬರುತ್ತದೆ ಎಂದು ಸಲಹೆಯನ್ನು ನೀಡಿದರು.
ಗ್ರಾಮಸ್ಥರ ಈ ಸಲಹೆಯನ್ನು ಒಪ್ಪಿದ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಸಂಬಂಧಪಟ್ಟ ಗಣಿಗಾರಿಕೆ ಮಾಲಿಕರ ಜೊತೆಯಲ್ಲಿ ಮಾತನಾಡಿ ಇದರ ಬಗ್ಗೆ ಒಂದು ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಸಾಧ್ಯವಾದಷ್ಟು ನಿಮಗೆ ಉಪಯುಕ್ತವಾದ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಆಮ್ಆದ್ಮಿಪಾರ್ಟಿ ಜಿಲ್ಲಾಧ್ಯಕ್ಷರಾದ ಜಗದೀಶ್ ಭೀಮಸಮುದ್ರದಲ್ಲಿ ಗಣಿಗಾರಿಕೆ ಯನ್ನು ಮಾಡುತ್ತಿರುವುದರಿಂದ ಸಣ್ಣ ಮಕ್ಕಳು ವಯಸ್ಸಾದವರು ಹೊರಗಡೆ ಬಾರದ ಸ್ಥಿತಿ ನಿರ್ಮಾಣ ವಾಗಿದೆ. ಲಾರಿಗಳ ಧೂಳಿನಿಂದ ಜನರಿಗೆ ಕೆಮ್ಮು, ನೆಗಡೆ, ಕಫ, ಜ್ವರಗಳು ಕಾಣಿಸಿಕೊಳ್ಳುತ್ತಿದೆ. ರಾತ್ರಿ ಸಮಯದಲ್ಲಿ ಖಾಲಿ ಲಾರಿಗಳ ಓಡಾಟದಿಂದ ಮನೆಯಲ್ಲಿ ಮಲಗಿದವರಿಗೆ ನಿದ್ದೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಮನೆಯ ಬಾಗಿಲನ್ನು ಮುಚ್ಚಿಕೊಂಡು ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದಿರು ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು ರಸ್ತೆಗಳು ಪೂರ್ಣ ಕೆಂಪಾಗಿವೆ ಇದರ ನಿವಾರಣೆಗಾಗಿ ಅದಿರು ಕಂಪನಿಯವರು ನೀರನ್ನು ಹಾಕುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಗುಂಡಿಗಲು ಇದ್ದರೂ ಸಹಾ ಕಾಣುವುದಿಲ್ಲ ಬೈಕ್ ಸವಾರರು ಬಿದ್ದು ಗಾಯಾಗೊಂಡು ಕೈ,ಕಾಲುಗಳನ್ನು ಮುರಿದುಕೊಂಡಿದ್ದಾರೆ. ಈನ ಎಲ್ಲಾ ಹಿನ್ನಲೆಯಲ್ಲಿ ಭೀಮಸಮುದ್ರದಿಂದ ಲಾರಿಗಳಲ್ಲಿ ಅದಿರು ಸಾಗಾಟವನ್ನು ಕೈಬಿಟ್ಟು ರೈಲ್ವೆ ಮೂಲಕವಾಗಿ ಅದಿರು ಸಾಗಾಟವನ್ನು ಮಾಡುವುದರ ಮೂಲಕ ಈ ಎಲ್ಲಾ ಸಮಸ್ಯೆಗಳಿಂದ ಪಾರು ಮಾಡುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷರಾದ ಶಂಕರ ಮೂರ್ತಿ, ಉಪಾಧ್ಯಕ್ಷರಾದ ಪೂರ್ಯನಾಯ್ಕ್, ಕಾರ್ಯದರ್ಶಿ ರಘು, ಸಂಘಟನಾ ಕಾರ್ಯದರ್ಶಿ ಈರಣ್ಣ, ಖಂಜಾಚಿ ಬಸವರಾಜು, ನಿರ್ದೆಶಕರಾದ ವಿರೇಶ್, ಕುಮಾರ್, ಜಗದೀಶ್, ಪ್ರಸನ್ನ, ರೈತ ಮುಖಂಡರುಗಳಾದ ಭೂತಯ್ಯ, ಧನಂಜಯ ಬಸ್ತಿಹಳ್ಳಿ ಸುರೇಶ್ ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.
































