ಚಿತ್ರದುರ್ಗ: ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿ ಪ್ರಯುಕ್ತ ಗಣೇಶ ಮೂರ್ತಿಗಳನ್ನು ಪೂಜಿಸಿದ ನಂತರ ನೀರಿನ ಮೂಲಗಳಾದ ಹೊಂಡ, ಕೆರೆ, ಭಾವಿಗಳಲ್ಲಿ ವಿಸರ್ಜಿಸುವುದರಿಂದ ಜಲ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಉಂಟಾಗಿ ಜೀವ ರಾಶಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಸರಕ್ಕೆ ದಕ್ಕೆಯಾಗದಂತೆ ಗಣೇಶ ಚತುರ್ಥಿ ಆಚರಿಸಲು ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ತಾತ್ಕಾಲಿಕ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ.
ಚಿತ್ರದುರ್ಗ ನಗರಸಭೆ ಪ್ರದೇಶದ ಸಾರ್ವಜನಿಕರು ಪೂಜಿಸಿದ ನಂತರ ಗಣೇಶ ಮೂರ್ತಿಗಳನ್ನು ವಿಸರ್ಜಿಸಲ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ಸದ್ಬಳಕೆ ಮಾಡಿಕೊಂಡು ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸಲು ಕೋರಿದೆ.
ತಾತ್ಕಾಲಿಕ ನೀರಿನ ತೊಟ್ಟಿ ವ್ಯವಸ್ಥೆ ಮಾಡಿರುವ ಸ್ಥಳಗಳ ವಿವರ: ಚಿತ್ರದುರ್ಗ ನಗರದ ಒನಕೆ ಓಬವ್ವ ಸ್ಟೆಡಿಯಂ ಹತ್ತಿರ, ಸ್ಟೆಡಿಯಂ ರಸ್ತೆ, ರಾಜ್ ಕುಮಾರ್ ಪಾರ್ಕ್ ಹತ್ತಿರ ಐಯುಡಿಪಿ ಬಡಾವಣೆ, ಏಕನಾಥೇಶ್ವರಿ ಪಾದ ಗುಡಿ ಮುಂಭಾಗ ಕೋಟೆ ರಸ್ತೆ, ಗಣೇಶ ದೇವಸ್ಥಾನದ ಹತ್ತಿರ ಜೆ.ಸಿ.ಆರ್. ಬಡಾವಣೆ, ಸಿಹಿನೀರು ಹೊಂಡದ ಆವರಣ, ಪತಾಂಜಲಿ ಆಸ್ಪತ್ರೆ ಪಕ್ಕ, ಚಿನ್ನಕೇಶವಸ್ವಾಮಿ ದೇವಸ್ಥಾನದ ಹತ್ತಿರ ಕೆಳಗೋಟೆ, ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಮುಂಭಾಗ ತುರುವನೂರು ರಸ್ತೆ, ದವಳಗಿರಿ ಬಡಾವಣೆ ಗಣೇಶ ದೇವಸ್ಥಾನದ ಮುಂಭಾಗ, ಗೋಪಾಲಪುರ ನೀರಿನ ಟ್ಯಾಂಕ್ ಹತ್ತಿರ, ರೈತ ಭವನದ ಹತ್ತಿರ ಗುಮಸ್ತರ ಕಲೋನಿ, ತಿಪ್ಪಿನಘಟ್ಟಮ್ಮ ದೇವಸ್ಥಾನದ ಹತ್ತಿರದ ಪಾರ್ಕ್, ಜೋಗಿಮಟ್ಟಿ ರಸ್ತೆ, ಚಂದ್ರವಳ್ಳಿ ಕೆರೆ ಹತ್ತಿರದ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
( ಸಾಂದರ್ಭಿಕ ಚಿತ್ರ)