ಬೆಂಗಳೂರು: ‘ಸಮಾಜದಲ್ಲಿ ಗಲಾಟೆ, ಗಲಭೆ ಸೃಷ್ಟಿಸುವುದು BJP ಕಾರ್ಯಕರ್ತರ ಹುಟ್ಟು ಗುಣ’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಬಿಜೆಪಿಯವರು ವೇಷ ಹಾಗೂ ಹೆಸರು ಬದಲಿಸಿಕೊಂಡು ಕಿತಾಪತಿ ಮಾಡಿ ಕಿತ್ತಾಟ ತಂದಿಡುವ ಕೆಲಸವನ್ನು ಅವರು ಯಾವಾಗಲು ಮಾಡುತ್ತಾ ಬಂದಿದ್ದಾರೆ.
ಇದರ ಮಧ್ಯೆಯೇ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವ ಕೆಲಸ ರೂಢಿಯಾಗಿದ್ದು, ಅವರ ಅಧಿಕಾರದಲ್ಲಿದ್ದಾಗ ನೈತಿಕ ಪೊಲೀಸ್‌ಗಿರಿ, ಗಲಾಟೆ ಮಾಡುವುದು, ಹೊಡೆಯುವುದು ಮಾಡಿಕೊಂಡು ಬಂದಿದ್ದಾರೆಂದು ತಿಳಿಸಿದ್ದಾರೆ.































