ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 75,000 ಕೋಟಿ ರೂಫ್ಟಾಪ್ ಸೌರ ಯೋಜನೆಗೆ ಕೇಂದ್ರ ಗುರುವಾರ ಅನುಮೋದನೆ ನೀಡಿದ್ದು ಒಂದು ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ.
2025 ರ ವೇಳೆಗೆ ಕೇಂದ್ರ ಕಚೇರಿಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವುದು ಈ ಯೋಜನೆಯ ಗುರಿ. ಈ ಯೋಜನೆಯಿಂದ ಕೋಟಿಗಟ್ಟಲೆ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು.
ಈ ಯೋಜನೆಯಡಿಯಲ್ಲಿ ಒಂಂದು ಕೋಟಿ ಕುಟುಂಬಗಳು 300 ಯೂನಿಟ್ಗಳ ಉಚಿತ ವಿದ್ಯುತ್ ಪಡೆಯುತ್ತವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.