ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದ

WhatsApp
Telegram
Facebook
Twitter
LinkedIn

ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ ಮಾಹಿತಿಯನ್ನು ಕೇಳಿದ್ರೆ ಗೂಗಲ್ ತಕ್ಷಣ ಉತ್ತರ ನೀಡುತ್ತದೆ. ಇದರಿಂದ ಎಲ್ಲದಕ್ಕೂ ಗೂಗಲ್‌ಗೆ ಅವಲಂಬಿತವಾಗಿದ್ದೇವೆ. ಇಲ್ಲೊಬ್ಬ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಸುಲಭ ಮಾರ್ಗಗಳನ್ನು ಹುಡುಕಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಯುವಕ ಗೂಗಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋ ವಿಧಾನಗಳನ್ನು ಸರ್ಚ್‌ ಮಾಡಿದ್ಮೇಲೆ ಏನಾಯ್ತು ಎಂಬುದರ ಬಗ್ಗೆ ಇಲ್ಲಿದೆ ಕುತೂಹಲಕಾರಿ ವಿಷಯ.

ರಾಜಸ್ಥಾನದ 28 ವರ್ಷದ ಯುವಕ ಮುಂಬೈ ಉತ್ತರ ಭಾಗದ ಮಾಲವಾನಿಯದಲ್ಲಿ ನೆಲೆಸಿದ್ದ. ಈತ ಗೂಗಲ್‌ನಲ್ಲಿ ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳ ಕುರಿತು ಗೂಗಲ್‌ನಲ್ಲಿ ಶೋಧಿಸುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಅತ್ಯುತ್ತಮ ವಿಧಾನಗಳ ಕುರಿತು ಗೂಗಲ್‌ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದ. ಈ ಮಾಹಿತಿ ಅಂತಾರಾಷ್ಟ್ರೀಯ ಸೈಬರ್ ಪೊಲೀಸರ ಗಮನಕ್ಕೆ ಬಂದಿದೆ. ಇಂಟರ್‌ಪೋಲ್ ಪೊಲೀಸರು ಈತನ ಮಾಹಿತಿ ಕಲೆ ಹಾಕಿದ್ದು ಕೂಡಲೇ ಮುಂಬೈ ಪೊಲೀಸರಿಗೆ ಸಂದೇಶ ನೀಡಿದ್ದಾರೆ.

ಇಂಟರ್‌ಪೋಲ್ ಸೈಬರ್ ಅಧಿಕಾರಿಗಳು ಸೂಸೈಡ್‌ಗಾಗಿ ಸರ್ಚ್‌ ಮಾಡುತ್ತಿದ್ದ ಯುವಕನ ಮೊಬೈಲ್‌ ನಂಬರ್, ಇ-ಮೇಲ್ ಸಹಿತ ಮುಂಬೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಮೊಬೈಲ್ ನಂಬರ್ ಆಧಾರದ ಮೇಲೆ ಮುಂಬೈ ಪೊಲೀಸರು ಆತನನ್ನು ಪತ್ತೆ ಮಾಡಿದ್ದು, ವಿಚಾರಣೆ ನಡೆಸಿದ್ದಾರೆ.

ಜೈಲು ಸೇರಿದ ಅಮ್ಮ, ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಯುವಕ:

ಇನ್ನೂ ಯುವಕನ್ನು ಪೊಲೀಸರು ವಿಚಾರಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ಕಳೆದ 2 ವರ್ಷಗಳ ಹಿಂದೆ ಈ ಯುವಕನ ತಾಯಿ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದರು. ತನ್ನ ತಾಯಿಯ ಬಿಡುಗಡೆಗೆ ಪ್ರಯತ್ನಿಸಿದ್ದ ಯುವಕ ಮಾನಸಿಕ ಖಿನ್ನತೆಗೂ ಒಳಗಾಗಿದ್ದ ಎನ್ನಲಾಗಿದೆ. ಇದರ ಜೊತೆಗೆ ಕಳೆದ 6 ತಿಂಗಳಿಂದ ಈತ ನಿರುದ್ಯೋಗಿಯಾಗಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೇ ನನಗೆ ಉಳಿದಿರೋ ಮಾರ್ಗ ಎಂದು ಭಾವಿಸಿದ್ದ.

ಆತ್ಮಹತ್ಯೆಗೆ ಚಿಂತಿಸಿದ್ದ ಯುವಕ ಸದ್ಯ ಮುಂಬೈ ಪೊಲೀಸರ ವಶದಲ್ಲಿದ್ದಾನೆ. ಆತನ ಆರೋಗ್ಯ ಪರೀಕ್ಷೆ ನಡೆಸಲಾಗಿದೆ. ಇಂಟರ್‌ಪೋಲ್ ಹಾಗೂ ಮುಂಬೈ ಪೊಲೀಸರ ಕಾರ್ಯಾಚರಣೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವಕನನ್ನು ಪಾರು ಮಾಡಲಾಗಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon