ಗೂಗಲ್‌ನಿಂದ ಮತ್ತಷ್ಟು ಉದ್ಯೋಗಿಗಳು ಕೆಲಸದಿಂದ ವಜಾ – ಸಿಇಒ ಸುಂದರ್‌ ಪಿಚೈ ಹೇಳಿದ್ದೇನು?

2024ರ ಆರಂಭದಿಂದಲೂ, ಗೂಗಲ್ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಷ್ಟೇ ಅಲ್ಲದೆ 2023ರಲ್ಲಿ 12,000 ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆಯಂತಲ್ಲದೆ, ಈ ವರ್ಷದ ಕಡಿತವು ಕ್ರಮೇಣ ಮತ್ತು ಸಣ್ಣ ಬ್ಯಾಚ್‌ಗಳಲ್ಲಿ ಸಂಭವಿಸಿದೆ. ಇದರಿಂದಾಗಿ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಗೂಗಲ್‌ ಸಿಇಒ ಸುಂದರ್‌ ಪಿಚೈ ವಿವರವಾಗಿ ವಜಾಗೊಳಿಸುವಿಕೆ ಬಗ್ಗೆ ತಿಳಿಸಿದ್ದಾರೆ.

ಈ ವರ್ಷ ಗೂಗಲ್‌ನಲ್ಲಿ ಬರೋಬ್ಬರಿ 12,000 ಉದ್ಯೋಗಿಗಳನ್ನು ಕಂಪನಿಯು ವಜಾಗೊಳಿಸಿದೆ. ಸಿಎನ್‌ಬಿಸಿಯ ವರದಿಯ ಪ್ರಕಾರ, ಗೂಗಲ್‌ನಲ್ಲಿ ಉದ್ಯೋಗದ ಕಡಿತಕ್ಕೆ ಒಳಗಾದ ಮಾಜಿ ಉದ್ಯೋಗಿಗಳು ಆಲ್-ಹ್ಯಾಂಡ್ಸ್ ಮೀಟ್‌ನಲ್ಲಿ, ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಉದ್ಯೋಗದಿಂದ ವಜಾ ಮಾಡಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.

“ಉದ್ಯೋಗದಿಂದ ವಜಾಗೊಳಿಸುವಿಕೆಗಳು ಸೃಷ್ಟಿಸುವ ಅನಿಶ್ಚಿತತೆ ಮತ್ತು ಅಡ್ಡಿಗಳಿಗೆ ಅಂತ್ಯವನ್ನು ನೌಕರರು ಯಾವಾಗ ನಿರೀಕ್ಷಿಸಬಹುದು?” ಎಂದು ಪಿಚೈ ಅವರನ್ನು ಪ್ರಶ್ನೆ ಮಾಡಲಾಯಿತು. ಈ ಹಿಂದೆ 2024 ರ ಮೊದಲಾರ್ಧದಲ್ಲಿ ಹೆಚ್ಚಿನ ಉದ್ಯೋಗ ವಜಾಗೊಳಿಸುವಿಕೆಗಳು ನಡೆಯುತ್ತವೆ ಎಂದು ಗೂಗಲ್‌ ಸಿಇಒ ಸುಂದರ್‌ ಪಿಚೈ ಹೇಳಿದರು. “ಪ್ರಸ್ತುತ ಪರಿಸ್ಥಿತಿಗಳನ್ನು ಊಹಿಸಿದರೆ, ವರ್ಷದ ದ್ವಿತೀಯಾರ್ಧದಲ್ಲಿ ಇದರ ಪ್ರಮಾಣ ಚಿಕ್ಕದಾಗಿರುತ್ತದೆ. ವರ್ಷವಿಡೀ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಬಗ್ಗೆ ಗೂಗಲ್ ಬಹಳ, ಶಿಸ್ತುಬದ್ಧವಾಗಿರಬೇಕು ಎಂದು ಸುಂದರ್‌ ಪಿಚೈ ತಿಳಿಸಿದರು. “ಹೊಸ ಕೆಲಸಗಳನ್ನು ಮಾಡಲು ನಮ್ಮಲ್ಲಿ ಸಾಕಷ್ಟು ಬೇಡಿಕೆಯಿದೆ ಮತ್ತು ನಾವು ಈ ಹಿಂದೆ ಹೆಚ್ಚುತ್ತಿರುವ ಹೆಡ್‌ಕೌಂಟ್ ಮೂಲಕ ಪ್ರತಿಫಲಿತವಾಗಿ ಆ ಕೆಲಸಗಳನ್ನು ಸಹ ಮಾಡುತ್ತಿದ್ದೆವು” ಎಂದು ಪಿಚೈ ಹೇಳಿದರು.

Advertisement

CNBCಯ ವರದಿಯ ಪ್ರಕಾರ, “ನಾವು ಈಗ ಪರಿವರ್ತನೆಯ ಮೂಲಕ ಅದನ್ನು ಮಾಡಲು ಸಾಧ್ಯವಿಲ್ಲ. ಕಂಪನಿಯಾಗಿ, ಗೂಗಲ್ ತನ್ನ ವೆಚ್ಚವನ್ನು ಹೆಚ್ಚಿಸುತ್ತಿದೆ. ಆದರೆ ನಾವು ನಮ್ಮ ಬೆಳವಣಿಗೆಯ ವೇಗವನ್ನು ಮಧ್ಯಮಗೊಳಿಸುತ್ತಿದ್ದೇವೆ. ನಾವು ಜನರನ್ನು ಮರು-ಹಂಚಿಕೆ ಮಾಡುವ ಮತ್ತು ಕೆಲಸಗಳನ್ನು ಬೇರೆ ರೀತಿಯಲ್ಲಿ ಮಾಡುವ ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ” ಎಂದು ಪಿಚೈ ಅವರು ಗೂಗಲ್‌ನ ಮಾಜಿ ಮತ್ತು ಹಾಲಿ ಉದ್ಯೋಗಿಗಳಿಗೆ ತಿಳಿಸಿದರು. “ಒಂದು ಕಂಪನಿಯಾಗಿ ದೀರ್ಘಾವಧಿಯ ಪರಿವರ್ತನೆಯ ಮೂಲಕ ಕೆಲಸ ಮಾಡುವುದು ಗೂಗಲ್‌ನ ಪ್ರಮುಖ ಗುರಿಯಾಗಿದೆ. ಅದೇ ಈ ವಜಾಗೊಳಿಸುವಿಕೆಯ ಹಿಂದಿರುವ ಕಾರಣ” ಸುಂದರ ಪಿಚೈ ಹೇಳಿದ್ದಾರೆ. ಗೂಗಲ್ ಕೆಲಸದಲ್ಲಿನ ದಕ್ಷತೆಯನ್ನು ಹೆಚ್ಚಿಸಲು ಬಯಸುತ್ತದೆ ಮತ್ತು ಅದನ್ನು ಶಾಶ್ವತವಾಗಿ ಮಾಡಲು ಬಯಸುತ್ತದೆ ಎಂದು ಪಿಚೈ ವಿವರಿಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement