ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯ ಹಣ ಕಳೆದ 2 ತಿಂಗಳಿನಿಂದ ಮಹಿಳೆಯರ ಖಾತೆಗೆ ಜಮೆ ಆಗುತ್ತಿಲ್ಲ.
ತಲಾ ₹2 ಸಾವಿರ ಮೊತ್ತ ಪಾವತಿಯಾಗದಿರುವುದು ಮಹಿಳೆಯರ ಬೇಸರಕ್ಕೆ ಕಾರಣವಾಗಿದೆ. ಮಾರ್ಚ್ ಬಳಿಕ ಈವರೆಗೆ ಖಾತೆಗೆ ಹಣ ಜಮಾ ಆಗಿಲ್ಲ.
ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಮೊತ್ತವನ್ನು ಏಕಕಾಲಕ್ಕೆ ಜಮಾ ಮಾಡಿದ್ದ ಸರ್ಕಾರವು ಬಳಿಕ ಹಣ ಪಾವತಿಸುವುದನ್ನು
ಸ್ಥಗಿತಗೊಳಿಸಿದೆ ಎಂದು ಮಹಿಳೆಯರ ಆರೋಪ ಕೇಳಿಬಂದಿದೆ. ಈ ಕುರಿತು ಮಹಿಳೆಯರು ಭಾರೀ ನಿರಾಸೆಗೊಂಡಿದ್ದಾರೆ