ರಾಮನಗರ: ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಹಿಳೆಯರಿಗೆ ಕರೆ ಕೊಟ್ಟಿದ್ದಾರೆ.
ರಾಮನಗರದಲ್ಲಿ ಮಾತನಾಡಿ, ಈ ಹಣವನ್ನು ಉಳಿತಾಯ ಮಾಡಿ ಮಕ್ಕಳ ಭವಿಷ್ಯಕ್ಕೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಈ ಯೋಜನೆಯ ಮೂಲಕ ಸರ್ಕಾರ ಮಹಿಳೆಯರಿಗೆ ಆರ್ಥಿಕ ಚೈತನ್ಯ ನೀಡುತ್ತಿದೆ. ಶೇ. 88ರಷ್ಟು ಮಹಿಳೆಯರಿಗೆ ಹಣ ತಲುಪಿದೆ, ಬ್ಯಾಂಕ್ ಖಾತೆ ಸಮಸ್ಯೆಯಿಂದ ಉಳಿದವರಿಗೆ ಹಣ ತಲುಪಲು ವಿಳಂಬವಾಗಿದ್ದು, ಶೀಘ್ರ ಸಮಸ್ಯೆ ಪರಿಹರಿಸಲಾಗುವುದು ಎಂದಿದ್ದಾರೆ.