ಜೂಲೈ ತಿಂಗಳಿನಿಂದ ಮಹಿಳೆಯರಿಗೆ ನೀಡುವ ಗೃಹಲಕ್ಷ್ಮಿ ಯೋಜನೆಯ ಹಣ ಅರ್ಜಿ ಸಲ್ಲಿಸಿದ ತೃತೀಯ ಲಿಂಗಿಗಳಿಗೆ ಸಹ ಸಿಗಲಿದೆ. ಜಿಲ್ಲಾಧಿಕಾರಿಗಳು ನೀಡುವ ತೃತೀಯ ಲಿಂಗಿ ಗುರುತಿನ ಕಾರ್ಡ್ ಪಡೆದುಕೊಂಡವರು ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ.
ಗುರುತಿನ ಕಾರ್ಡ್ ಪಡೆದವರು ಹತ್ತಿರದ ಗ್ರಾಮ್ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.