ಮನೆ ಯಜಮಾನಿಯರ ಖಾತೆಗೆ ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 6 ಕಂತುಗಳ ಹಣವನ್ನು ಜಮಾ ಮಾಡಿದೆ ಎಂದು ಕೆಲಕಡೆ ವರದಿಯಾಗಿದೆ.
ಪ್ರತಿ ತಿಂಗಳ 20ನೇ ತಾರೀಖಿನೊಳಗೆ ರಾಜ್ಯ ಸರ್ಕಾರವು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದು, ಸದ್ಯ ಯಜಮಾನಿಯರು ಇದೀಗ 7ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.
ಗೃಹಲಕ್ಷ್ಮಿ ಡಿಬಿಟಿ ಮೂಲಕ ಈ ತಿಂಗಳ(ಮಾರ್ಚ್) ಹಣವನ್ನು 2-3ನೇ ವಾರದಲ್ಲಿ ವರ್ಗಾಯಿಸುವ ಸಾಧ್ಯತೆ ಇದೆ.
ಒಂದು ವೇಳೆ ಹಣ ಜಮೆಯಾಗದಿದ್ದಲ್ಲಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.