ಬೆಂಗಳೂರು: ಗೃಹಲಕ್ಷ್ಮಿ ಹಣ ಜಮೆ ಆಗದಿರುವುದಕ್ಕೆ ಕಾರಣ? ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ 1 ಕೋಟಿ ಕುಟುಂಬಗಳ ಯಜಮಾನಿಯರ ಖಾತೆಗಳಿಗೆ 2 ಸಾವಿರ ಹಣ ಹಾಕಲಾಗಿದೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಬ್ಯಾಂಕಿಂಗ್‌ನಲ್ಲಿ ಸಮಸ್ಯೆಯಾಗಿತ್ತು. ಕೆಲ ಖಾತೆದಾರರು ದಾಖಲೆ ತಿದ್ದುಪಡಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಕೆಲವರಿಗೆ ದುಡ್ಡು ಜಮೆಯಾಗಿಲ್ಲ. ಕಳೆದ ಆ.15ರೊಳಗೆ ಯಾರು ಅರ್ಜಿ ಅಪ್ಲೋಡ್ ಮಾಡಿದ್ದರೋ ಅವರ ಖಾತೆಗೆ ದುಡ್ಡು ಬಂದಿದೆ. ಆ.15 ನಂತರ ಮಾಡಿದವರಿಗೆ ಸದ್ಯದಲ್ಲೇ ಹಣ ಜಮೆಯಾಗಲಿದೆ ಎಂದಿದ್ದಾರೆ.