ಸರ್ಕಾರ ಈಗಾಗಲೇ ಫಲಾನುಭವಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಮೂರನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಿದೆ. ಸಾಕಷ್ಟು ಮಹಿಳೆಯರು ಸರ್ಕಾರದ ಈ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು 75ರಿಂದ 80% ನಷ್ಟು ಸರ್ಕಾರ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಆದರೆ ಅರ್ಜಿ ಸಲ್ಲಿಸಿ ಮೂರರಿಂದ ನಾಲ್ಕು ತಿಂಗಳು ಕಳೆದರೂ ಕೂಡ ತಮ್ಮ ಖಾತೆಗೆ (Bank Account) ಮಾತ್ರ ಒಂದು ರೂಪಾಯಿ ಬಂದಿಲ್ಲ ಎನ್ನುವ ಮಹಿಳೆಯರು ಇನ್ನೂ ಇದ್ದಾರೆ, ಹಾಗಾಗಿ ಇಂಥವರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡುವುದಕ್ಕೆ ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಅನ್ನಭಾಗ್ಯ ಯೋಜನೆ ಸ್ಟೇಟಸ್ ಈ ರೀತಿ ತೋರಿಸಿದ್ರೆ ನಿಮ್ಮ ಖಾತೆಗೆ ಹಣ ಜಮಾ ಆಗೋಲ್ಲ
ಗೃಹಲಕ್ಷ್ಮಿ ಅದಾಲತ್ ಆರಂಭಿಸಲು ಸೂಚನೆ! (Gruha Lakshmi Adalat) ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಸರ್ಕಾರಕ್ಕೆ ಒಟ್ಟು ಬಂದಿದ್ದ 1.17 ಕೋಟಿ ಅರ್ಜಿಗಳಲ್ಲಿ 1.10 ಕೋಟಿ ಜನರ ಖಾತೆಗೆ ಹಣ ವರ್ಗಾವಣೆ ಆಗಿದೆ. ಉಳಿದವರ ಖಾತೆಗೆ ಇನ್ನೂ ಜಮಾ ಆಗಿಲ್ಲ. ಇದಕ್ಕೆ ಮುಖ್ಯವಾಗಿರುವ ಕಾರಣ ಗೃಹಲಕ್ಷ್ಮಿಯ ಹಣ ಬರಬೇಕು ಅಂದ್ರೆ ಮಹಿಳೆಯರ ಖಾತೆ ಆಕ್ಟಿವ್ ಆಗಿರಬೇಕು ಹಾಗೂ ಮಹಿಳೆಯರ ಬ್ಯಾಂಕ್ ಖಾತೆ ಆಧಾರ್ (Bank account Aadhaar link) ಸಂಖ್ಯೆಯ ಜೊತೆಗೆ ಲಿಂಕ್ ಆಗಿರಬೇಕು. ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ; ಇಲ್ಲವೇ ತಕ್ಷಣ ಈ ಕೆಲಸ ಮಾಡಿ ಇವು ಆಗದೆ ಇದ್ದಲ್ಲಿ ಅಂತಹ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Deposit) ಆಗುತ್ತಿಲ್ಲ, ಇದಕ್ಕಾಗಿ ಸರ್ಕಾರ ಈಗ ಉತ್ತಮವಾಗಿರುವ ಪರಿಹಾರ ಸೂಚಿಸಿದ್ದು ಇನ್ನು ಮುಂದೆ ಅಂಗನವಾಡಿ ಸಹಾಯಕಿಯರ ಸಹಾಯ ಪಡೆದು ಬ್ಯಾಂಕಿಗೆ ಅವರ ಜೊತೆಗೆ ಮಹಿಳೆಯರು ಹೋಗಿ ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಡಿಸೆಂಬರ್ ತಿಂಗಳ ಅಂತ್ಯದ ಒಳಗೆ ಪ್ರತಿಯೊಬ್ಬರ ಖಾತೆಗೂ (Bank Account) ಹಣ ಜಮಾ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಗೃಹಲಕ್ಷ್ಮಿ 3ನೇ ಕಂತಿನ ಹಣ 26 ಜಿಲ್ಲೆಗಳಿಗೆ ಒಮ್ಮೆಲೇ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ ದೂರು ಸಲ್ಲಿಸಬಹುದು (Complaint) ಇಷ್ಟಾಗಿಯೂ ನಿಮ್ಮ ಖಾತೆಗೆ ಹಣ ಜಮಾ ಆಗದೇ ಇದ್ದಲ್ಲಿ ಗೃಹಲಕ್ಷ್ಮಿ ಅದಾಲತ್ ಅಡಿಯಲ್ಲಿ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಬಹುದು ಆಗ ಸಂಬಂಧ ಪಟ್ಟ ಅಧಿಕಾರಿಗಳು ನಿಮ್ಮ ಮನೆಗೆ ಬಂದು ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆ ಅಥವಾ ಗೃಹಲಕ್ಷ್ಮಿ ಹಣ ನಿಮಗೆ ಯಾಕೆ ಸಂದಾಯವಾಗುತ್ತಿಲ್ಲ ಎಂಬುದರ ಪರಿಶೀಲನೆ ನಡೆಸಿ ಪರಿಹಾರ ಕೊಡಲಿದ್ದಾರೆ. ಹಾಗಾಗಿ ಡಿಸೆಂಬರ್ ತಿಂಗಳಾದರೂ ಕೂಡ ನಿಮಗೆ ಹಣ ಬಾರದೆ ಇದ್ದರೆ ತಕ್ಷಣವೇ ಗ್ರಾಮ ಪಂಚಾಯತ್ ಗೆ ದೂರು ಸಲ್ಲಿಸಿ 3 ಕಂತಿನ ಹಣ ಅಂದರೆ ಒಟ್ಟು 6,000 ರೂಪಾಯಿಗಳು ನಿಮ್ಮ ಖಾತೆಗೆ ಸಂದಾಯವಾಗುವಂತೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.