ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಮಹತ್ವದ್ದು. ಈ ಯೋಜನೆಯ 7ನೇ ಕಂತಿನ ಹಣ ಈಗಾಗಲೇ ಪಾವತಿಯಾಗಿದೆ.
8ನೇ ಕಂತಿನ ಹಣವು ಈ ತಿಂಗಳ 3ನೇ ವಾರದಲ್ಲಿ ಅಥವಾ 4ನೇ ವಾರದಲ್ಲಿ ನಿಮ್ಮ ಖಾತೆಗೆ ಜಮೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ನಿಮ್ಮ ಖಾತೆಗೆ ಹಣ ಬರದೇ ಇದ್ದರೆ, ತಕ್ಷಣವೇ ಬ್ಯಾಂಕ್ ಗೆತೆರಳಿ ಪರಿಶೀಲನೆ ಮಾಡಿ. ಯಾವುದೇ ಸಮಸ್ಯೆ ಇದ್ದರೂ ಸರಿಪಡಿಸಿಕೊಳ್ಳಿ.