ನವದೆಹಲಿ: ಒಲಿಂಪಿಕ್ಸ್ ಸಮಿತಿಯ ನಿಯಮಗಳ ಉಲ್ಲಂಘನೆ ಪರಿಣಾಮ ಬ್ರೆಜಿಲಿಯನ್ ಈಜುಗಾರ್ತಿ ಅನಾ ಕೆರೊಲಿನಾ ವಿಯೆರಾ ಮಹತ್ವದ ಕ್ರೀಡಾಕೂಡ ಗ್ರಾಮದಿಂದಲೇ ಹೊರಬಿದ್ದಿದ್ದಾರೆ. ಹೌದು. ಅನಾ ಕೆರೊಲಿನಾ ಜುಲೈ 26 ರಂದು ತನ್ನ ಗೆಳೆಯನೊಂದಿಗೆ ಪ್ಯಾರಿಸ್‌ನ ಐಫೆಲ್ ಟವರ್ ನೋಡಲು ಹೋಗಿದ್ದಳು. ಈ ವೇಳೆ ಆಕೆ ಯಾರ ಅನುಮತಿಯನ್ನೂ ಪಡೆದಿರಲಿಲ್ಲ. ಅಲ್ಲದೇ ಆಕೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ನಿಂದ ವಿಷಯ ತಿಳಿದ ಒಲಿಂಪಿಕ್ ಅಧಿಕಾರಿಗಳು ಯಾವುದೇ ಅನುಮತಿ ಪಡೆಯದೆ ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಬ್ರೆಜಿಲ್ ಈಜು ಸಮಿತಿಯ ಮುಖ್ಯಸ್ಥ ಗುಟ್ಸಾವೊ ಒಟ್ಸುಕಾ, ‘ನಾನು ಒಲಿಂಪಿಕ್ ಕ್ರೀಡಾ ಗ್ರಾಮಕ್ಕೆ ಬಂದಿದ್ದು ಕಷ್ಟಪಟ್ಟು ಕೆಲಸ ಮಾಡಿದ ನಂತರ, ಆನಂದಿಸಲು ಅಲ್ಲ. ದೇಶದ ಜನರು ದೇಶಕ್ಕಾಗಿ ಆಟವಾಡಲು ಮತ್ತು ಪದಕಗಳನ್ನು ಗೆಲ್ಲಲು ಬಯಸುತ್ತಾರೆ. ಆದರೆ ಅನಾ ಕೆರೊಲಿನಾ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದರು. ಈ ವಿಷಯವನ್ನು ನಾವು ಒಲಿಂಪಿಕ್ಸ್ ಸಮಿತಿಯ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳು ವಿವರಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಂಡಿದ್ದಾರೆ’ ಎಂದು ತಿಳಿಸಿದರು.