ಗೋಲ್ ಗಪ್ಪಾ ಪ್ರಿಯರಿಗೆ ಕಾದಿದೆ ಶಾಕ್. ಗೋಲ್ ಗಪ್ಪಾ ಮೇಲೂ ನಿರ್ಬಂಧ ಬರಲಿದೆಯಾ ಅನ್ನೋ ಶಂಕೆ ಶುರುವಾಗಿದೆ. ಆಹಾರ ಇಲಾಖೆಯಿಂದ ಫುಡ್ ಟೆಸ್ಟಿಂಗ್ ಡ್ರೈವ್ ಮುಂದುವರೆದಿದೆ.
ಗೋಬಿ ಮಂಚೂರಿ, ರೆಡ್ ವೆಲ್ವೆಟ್ ಕೇಕ್ ಆಯ್ತು ಇದೀಗ ಗೋಲ್ ಗಪ್ಪಾದ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು ಬಿದ್ದಿದೆ. ಬೀದಿ ಬದಿ ಗೋಲ್ ಗಪ್ಪಾ ತಿನ್ನೋರಿಗೆ ಹುಷಾರ್, ಗೋಲ್ ಗಪ್ಪಾದ ಕ್ವಾಲಿಟಿ ಮೇಲೆ ಆರೋಗ್ಯ ಇಲಾಖೆಗೆ ಸಾಕಷ್ಟು ದೂರು ಬಂದಿದೆಯಂತೆ. ಈ ಹಿನ್ನೆಲೆ ಗೋಲ್ ಗಪ್ಪಾವನ್ನ ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ಬೆಂಗಳೂರಿನಲ್ಲಿ ರ್‍ಯಾಂಡಮ್ ಸ್ಯಾಂಪಲ್‌ಗಳನ್ನು ಅಧಿಕಾರಿಗಳು ಸಂಗ್ರಹ ಮಾಡುತ್ತಿದ್ದಾರೆ. ಗೋಲ್ ಗಪ್ಪಾಗೆ ಬಳಸುವ ಪುರಿ ಹೇಗೆ ತಯಾರಿ ಮಾಡ್ತಾರೆ. ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತದೆ.
ಇದ್ರಿಂದ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನ ತಿಳಿಯಲು ಇಲಾಖೆ ಮುಂದಾಗಿದೆ. ಈ ಹಿನ್ನೆಲೆ ಕಳೆದ ಎರಡು ದಿನದಿಂದ ತಯಾರಿಕಾ ಘಟಕದ ಮೇಲೆ ಆಹಾರ ಇಲಾಖೆ ದಾಳಿ ನಡೆಸಿ, 200ಕ್ಕೂ ಸ್ಯಾಂಪಲ್ ಗಳನ್ನು ಸಂಗ್ರಹಿಸಿದರೆ. ಇನ್ನು ಕೆಲವೇ ದಿನಗಳಲ್ಲಿ ವರದಿ ಬರಲಿದ್ದು, ಗೋಲ್ ಗಪ್ಪಾ ಮೇಲೂ ನಿರ್ಬಂಧ ವರಲಿದ್ಯಾ? ಕಾಡು ನೋಡಬೇಕಾಗಿದೆ.