ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಐದು ಕೋಟಿ ರೂಪಾಯಿ ಹಣ ಪಡೆದ ಬಳಿಕ ಟಿಕೆಟ್ ಹಂಚಿಕೆಯಾಗದ ಹಿನ್ನೆಲೆಯಲ್ಲಿ ವಂಚಿಸಿದ್ದ ಹಣ ವಾಪಾಸ್ ಕೇಳಿದ್ದ ಗೋವಿಂದ ಬಾಬು ಪೂಜಾರಿ ಅವರಿಗೆ ಖೆಡ್ಡಾ ತೋಡಲು ಚೈತ್ರಾ ಕುಂದಾಪುರ ಮುಂದಾಗಿದ್ದ ವಿಚಾರ ಬಯಲಾಗಿದೆ.
ಗೋವಿಂದ ಬಾಬು ಪೂಜಾರಿ ಅವರು ಹಣ ಮರಳಿ ಕೇಳುವ ಇಲ್ಲವೇ ಪೋಲಿಸ್ ದೂರು ದಾಖಲಿಸುವ ಬಗ್ಗೆ ಮಾತುಕತೆ ಆಡುತ್ತಿದ್ದಾಗಲೇ ಈ ಕಿಲಾಡಿ ಚೈತ್ರಾ ಕುಂದಾಪುರ ಐಟಿ ಮತ್ತು ಜಾರಿ ನಿರ್ದೇಶನಾಲಯಕ್ಕೆ ವಿಸ್ತೃತ ಪತ್ರ ಬರೆದು ತಾನು ಸೇಫ್ ಆಗಬಹುದು ಅಂದುಕೊಂಡಿದ್ದಳು.
ಅಕ್ರಮ ಹಣ ವರ್ಗಾವಣೆ ಬಗ್ಗೆ ದೂರು ನೀಡಿದ ಚೈತ್ರಾ ಕುಂದಾಪುರ ಅದರಲ್ಲಿ ಗೋವಿಂದ ಬಾಬು ಪೂಜಾರಿ ಅಕ್ರಮವಾಗಿ 6 ಕೋಟಿ ಹಣ ವರ್ಗಾವಣೆ ಮಾಡಿದ ಆರೋಪ ಹೊರಿಸಿದ್ದಳು.
ಗೋವಿಂದ ಪೂಜಾರಿ ಆಪ್ತನಿಂದ ಮಾಹಿತಿ ಪಡೆದಿದ್ದಾಗಿ ಇಡಿಗೆ ಪತ್ರ ಬರೆದಿದ್ದು, ಚೈತ್ರಾ ಜೊತೆಗೂ ಹಣ ನೀಡಿರುವ ಕುರಿತು ಗೋವಿಂದ ಪೂಜಾರಿ ಚರ್ಚಿಸಿದ್ದಾಗಿ ಉಲ್ಲೇಖಿಸಿದ್ದಳು.
ಪತ್ರದಲ್ಲಿ ಚುನಾವಣಾ ಟಿಕೆಟ್ ಗಾಗಿ ಹಣ ವರ್ಗಾಯಿಸಿದ್ದಾಗಿ ಉಲ್ಲೇಖಿಸಿದ್ದು, ಮಂಜುನಾಥ್ ಗೆ 1 ಕೋಟಿ, ಅಭಿನವ ಹಾಲಶ್ರೀ ಗೆ 1.5 ಕೋಟಿ, ವಿಶ್ವನಾಥ್ ಜೀ ಗೆ 3 ಕೋಟಿ ನೀಡಿದ್ದಾಗಿ ಚೈತ್ರಾ ಜೊತೆಗೆ ಗೋವಿಂದ ಬಾಬು ಪೂಜಾರಿ ಚರ್ಚೆ ನಡೆದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.