ರಾಯಚೂರು : ಇಲ್ಲಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕಚೇರಿ ವತಿಯಿಂದ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಗೋವಿನ ಜೋಳದಲ್ಲಿ ಫಾಲ್ ಸೈನಿಕ ಹುಳುವಿನ ಬಾಧೆ ನಿರ್ವಹಣೆಗಾಗಿ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಜಯಪ್ರಕಾಶ್ ಅವರು ತಿಳಿಸಿದ್ದಾರೆ.
ಬಾಧೆಯ ಲಕ್ಷಣಗಳು: ಮರಿ ಹುಳುಗಳು ಎಲೆಗಳ ಮೇಲ್ಮೈಯನ್ನು ಸ್ಕಾö್ಯಪಿಂಗ್ ಮಾಡುವುದು. ಡೊಡ್ಡದಾದ ಹುಳುಗಳು, ಕೇಂದ್ರ ಸುಳಿಯನ್ನು ತಿನ್ನುತ್ತವೆ. ಇದು ವ್ಯಾಪಕವಾದ ಎಲೆಗೊಂಚಲು ಉಂಟು ಮಾಡುತ್ತದೆ. ಮರಿ ಹುಳುಗಳು ಸುಳಿ ಮತ್ತು ತೆನೆಗಳನ್ನು ತಿನ್ನುತ್ತವೆ.
ನಿರ್ವಹಣೆ: ನಿರ್ವಹಣೆಗಾಗಿ ವ್ಯಾಪಕವಾಗಿ ಪೀಡೆ ಸಮೀಕ್ಷೆ ಕೈಗೊಂಡು ಕೀಟದ ಹರಡುವಿಕೆ ಮೇಲೆ ನಿಗಾವಹಿಸಬೇಕು. ಕೀಟದ ಮೊಟ್ಟೆಯ ಗುಂಪು ಮತ್ತು ಮರಿ ಹುಳುಗಳನ್ನು ಕೈಯಿಂದ ಆರಿಸಿ ನಾಶಪಡಿಸಬೇಕು. ಕೀಟದ ಬಾಧೆ ಕಡಿಮೆ ಇದ್ದಾಗ ಮರಿ ಹುಳುಗಳ ನಿರ್ವಹಣೆಗೆ ಬೇವಿನ ಮೂಲದ ಕೀಟನಾಶಕ ಅಜಾಡಿರಕ್ಟಿನ್ 1500 ಪಿಪಿಎಮ್ @ 2 ಮಿ.ಲೀ. ಅಥವಾ ಜೈವಿಕ ಶಿಲೀಂಧ್ರ ಕೀಟ ನಾಶಕ ಮೆಟಾರೈಜಿಯಮ್ ರಿಲೇ @ 2 ಗ್ರಾಂ ಅಥವಾ ಮೆಟಾರೈಜಿಯಮ್ ಅನಿಸೊಪ್ಪಿಎ @ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕೀಟದ ತೀವ್ರತೆ ಜಾಸ್ತಿ ಆದಾಗ ಹುಳುವನ್ನು ಹತೋಟಿಯಲ್ಲಿಡಲು ಲ್ಯಾಮ್ಡಸಹಲೋಥ್ರಿನ್ @ 1 ಎಂ.ಎಲ್ ಅಥವಾ ಇಮಾಮೆಕ್ಟಿನ್ ಬೆಂಜೋಯಿಟ್ 5% ಎಸ್.ಜಿ. @0.4 ಗ್ರಾಂ ಅಥವಾ ಕ್ಲೊರಾಂತ್ರಿನಿಲಿಪ್ರೊಲ್ 18.5 ಎಸ್.ಸಿ. @ 0.3 ಮಿ.ಲೀ. ಅಥವಾ ಸೈನೋಸ್ಯಾಡ್ 45 ಎಸ್.ಸಿ @ 0.3 ಎಂ.ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಬAಧಿಸಿದ ಆಯಾ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ಸಹಾಯಕ ಕೃಷಿ ನಿರ್ದೇಶಕÀ ಕಚೇರಿಯನ್ನು ಸಂಪರ್ಕಿಸುವAತೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.