ಕನ್ನಡ ಚಿತ್ರರಂಗದ ಮೇರು ಪ್ರತಿಭೆ ಕಿಚ್ಚ ಸುದೀಪ್. ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಲಾವಿದ. ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಮೆರೆದಿದ್ದಾರೆ. ಅವರ ಕಾರ್ಯಕ್ಕೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಲು ಮುಂದಾಗಿತ್ತು. ಆದರೆ, ಕಿಚ್ಚ ನಿರಾಕರಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ತುಮಕೂರು ವಿಶ್ವ ವಿದ್ಯಾಲಯವು 17 ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಬಳಿಕ ಈ ವಿಷಯವನ್ನು ಸುದೀಪ್ ಅವರ ಗಮನಕ್ಕೆ ತರಲಾಗಿತ್ತು. ವಿವಿ ನಿರ್ಧಾರಕ್ಕೆ ಸುದೀಪ್ ಅವರು ಧನ್ಯವಾದ ತಿಳಿಸಿರುವ ಅವರು, ಇದನ್ನು ನಯವಾಗಿ ತಿರಸ್ಕರಿಸಿದ್ದಾರೆ. ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರು ಇದ್ದಾರೆ. ಅವರಿಗೆ ಡಾಕ್ಟರೇಟ್ ನೀಡಿ ಎಂದು ಕಿಚ್ಚ ಸುದೀಪ್ ವಿವಿಯನ್ನು ಕೋರಿದ್ದಾರೆ.
