ಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆ

ನಮಗೆ ಆರೋಗ್ಯ ಸಮಸ್ಯೆಗಳು ಯಾವಾಗ ಯಾವ ರೂಪದಲ್ಲಿ ಶುರುವಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಮನೆಯಲ್ಲಿ ಅಡುಗೆಗೆ ಉಪ್ಪು ಜಾಸ್ತಿ ಆದರೆ, ಕ್ರಮೇಣವಾಗಿ ರಕ್ತದ ಒತ್ತಡ ಸಮಸ್ಯೆ ಬರುತ್ತದೆ, ಕೆಲವರಿಗೆ ಇದರಿಂದ ಹೃದಯಕ್ಕೆ ತೊಂದರೆಯುಂಟಾಗುತ್ತದೆ. ಸಾಕಷ್ಟು ಜನರು ಇದರಿಂದ ತಲೆಸುತ್ತಿ ಸಹ ಬೀಳುತ್ತಾರೆ. ಮನೆಯ ಹೊರಗಡೆ ಬಿದ್ದರೆ ಅಥವಾ ಮನೆಯಲ್ಲಿ ಯಾವುದೇ ಸ್ಥಳದಲ್ಲಿ ತಲೆಸುತ್ತಿ ಬಿದ್ದರೆ, ಅದನ್ನು ಬಿಪಿ ಅಥವಾ ಶುಗರ್ ಏರುಪೇರಾಗಿರಬಹುದು ಎಂದು ತಿಳಿದುಕೊಳ್ಳುತ್ತೇವೆ. ಹೃದಯಾಘಾತ ಆದಾಗಲೂ ಕೂಡ ಇದೇ ರೀತಿ ಅಂದುಕೊಳ್ಳುತ್ತೇವೆ.ಆದರೆ ಬಾತ್ರೂಮ್ ಒಳಗೆ ತಲೆಸುತ್ತಿ ಬಿದ್ದರೆ ಅದನ್ನು ಕೇವಲ ರಕ್ತದ ಒತ್ತಡ ಎಂದು ಹೇಳಬೇಡಿ ಎಂದು ಸಂಶೋಧನೆ ಹೇಳುತ್ತದೆ. ಏಕೆಂದರೆ ಅದು ಗ್ಯಾಸ್ ಸಿಲಿಂಡರ್ ಆಧಾರಿತ ಗೀಜರ್ ನಿಂದ ಬಿಸಿ ಮಾಡಿದ ನೀರಿನಿಂದ ಸ್ನಾನ ಮಾಡುವುದರಿಂದ ಆಗಿರಬಹುದು ಎನ್ನುವುದು ಇತ್ತೀಚಿನ ಸಂಶೋಧನೆಯ ವಾದ. ಸಂಶೋಧಕರು ಹೇಳುವ ಪ್ರಕಾರ ಯಾರು ಗ್ಯಾಸ್ ಸಿಲಿಂಡರ್ ಕನೆಕ್ಟ್ ಮಾಡಿದ ಗೀಸರ್ ನಿಂದ ನೀರು ಕಾಯಿಸಿ ಸ್ನಾನ ಮಾಡುತ್ತಾರೆ, ಅವರಿಗೆ ಕೇವಲ ಜ್ಞಾನ ತಪ್ಪುವುದು ಮಾತ್ರವಲ್ಲ, ಜೊತೆಗೆ ಪಾರ್ಶ್ವವಾಯು, ಎಪಿಲೆಪ್ಸಿ, ಕಾರ್ಡಿಯಾಕ್ ಅರೆಸ್ಟ್, ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ..!

ಸಂಶೋಧನೆಯಿಂದ ಕಂಡುಕೊಂಡ ಸತ್ಯ

ಬರೋಬ್ಬರಿ 26 ಜನರ ಮೇಲೆ ಎರಡು ವರ್ಷಗಳ ಕಾಲ ನಿರಂತರ ಸಂಶೋಧನೆಯಿಂದ ಕಂಡು ಕೊಂಡ ಸತ್ಯ ಇದಾಗಿದೆ. ಕೆಲವು ಸಂಶೋಧಕರು ಹೇಳುವ ಹಾಗೆ ಗ್ಯಾಸ್ ಗೀಜರ್ ಇನ್ಸ್ಟಾಲೇಷನ್ ಮಾಡುವಾಗ ಅದರ ಮಾನದಂಡಗಳನ್ನು ಸರಿಯಾಗಿ ಅನುಸರಿಸುವುದಿಲ್ಲ ಎನ್ನುವ ಕಂಪ್ಲೇಂಟ್ ಇದೆ. ಅಧ್ಯಯನ ಹೇಳುವ ಹಾಗೆ ಸಾಕಷ್ಟು ಪಾರ್ಶ್ವವಾಯು ಸಮಸ್ಯೆಗೆ ಗುರಿಯಾದ ರೋಗಿಗಳನ್ನು ಕೂಲಂಕು ಷವಾಗಿ ಅಧ್ಯಯನ ಮಾಡಿದಾಗ ಇದೊಂದು ಶಾಕಿಂಗ್ ಸಂಗತಿ ಹೊರಗೆ ಬಂದಿದೆ. ಕೆಲವರ ದೇಹದಲ್ಲಿ ಕಾರ್ಬನ್ ಮಾನಾಕ್ಸೈಡ್ ಪಾಯಿಸನ್ ರೂಪದಲ್ಲಿ ಸೇರಿಕೊಂಡು, ಕಾರ್ಡಿಯಾಕ್ ಅರೆಸ್ಟ್ ಆದಂತಹ ಉದಾಹರಣೆಗಳು ಕೂಡ ಇವೆ.

Advertisement

ಪಾರ್ಕಿನ್ಸನ್ ರೋಗಲಕ್ಷಣಗಳು

ಇದಕ್ಕೆ ಕಾರಣ ಏನೆಂದು ಪತ್ತೆಹಚ್ಚಿದಾಗ, ಕೆಲವರ ಮನೆಗಳಲ್ಲಿ ತಾರಸಿಗೆ ಚಿಮಣಿ ಹಾಕದೆ ಗ್ಯಾಸ್ ಗೀಜರ್ ಇನ್ಸ್ಟಾಲ್ ಮಾಡಿರುತ್ತಾರೆ. ಇದರಿಂದ ಕಾರ್ಬನ್ ಮಾನಾಕ್ಸೈಡ್ ಅಲ್ಲೇ ಉಳಿದು ಜನರ ದೇಹ ಸೇರುವ ಸಾಧ್ಯತೆ ಇರುತ್ತದೆ. ಕೆಲವು ಜನರಿಗೆ ಪಾರ್ಕಿನ್ಸನ್ ಪ್ರಕಾರದ ರೋಗಲಕ್ಷಣಗಳು ಕಂಡುಬಂದಿದ್ದವು. ಯಾವಾಗ ಸಿಲಿಂಡರ್ ಗ್ಯಾಸ್ ನಿಂದ ಬಿಡುಗಡೆಯಾದ ಗ್ಯಾಸ್ ಬಾತ್ ರೂಮ್ ನಲ್ಲಿ ಇರುವಂತಹ ಗಾಳಿಯನ್ನು ತೆಗೆದುಕೊಂಡು ನಂತರ ಕಾರ್ಬನ್ ಮಾನಾಕ್ಸೈಡ್ ಬಿಡುಗಡೆ ಮಾಡುತ್ತದೆ, ಅಲ್ಲಿಂದ ಮನುಷ್ಯರಿಗೆ ಕಾಯಿಲೆಗಳು ಮತ್ತು ರೋಗಲಕ್ಷಣಗಳು ಪ್ರಾರಂಭವಾಗುತ್ತವೆ.

ತಲೆಸುತ್ತು, ಪಾರ್ಶ್ವವಾಯು ಸಮಸ್ಯೆ ಬರಬಹುದಂತೆ!

ಈ ಹಿಂದೆ 2010ರಲ್ಲಿ ಇದೇ ರೀತಿಯ ಒಂದು ಅಧ್ಯಯನ ನ್ಯೂರಾಲಜಿ ತಜ್ಞರಿಂದ ದೆಹಲಿಯ ಪ್ರತಿಷ್ಠಿತ ಹಾಸ್ಪಿಟಲ್ ನಲ್ಲಿ ನಡೆಯಿತು. ಅಲ್ಲಿ ಸಹ ಸರಿಯಾದ ಮಾನದಂಡಗಳನ್ನು ಅನುಸರಿಸದೆ ಇನ್ಸ್ಟಾಲ್ ಮಾಡುವ ಗ್ಯಾಸ್ ಗೀಜರ್ ಜನರ ಆರೋಗ್ಯಕ್ಕೆ ಮಾರಕ ಎಂಬುದನ್ನು ಹೇಳಿದರು. ಜನರಿಗೆ ಇಂದು ಇದ್ದಕ್ಕಿದ್ದಂತೆ ತಲೆಸುತ್ತು ಬರುವುದು, ಪಾರ್ಶ್ವವಾಯು ಸಮಸ್ಯೆ ಎದುರಾಗುವುದು, ಕಾರ್ಡಿಯೋ ವ್ಯಾಸ್ಕುಲರ್ ಸಮಸ್ಯೆ ಕಂಡು ಬರುವುದು ಇವೆಲ್ಲವೂ ಸಹ ತೊಂದರೆದಾಯಕ ಎಂದು ಹೇಳಿದರು.

ಗ್ಯಾಸ್ ಗೀಜರ್‌ಗಳಿಂದ ಉಂಟಾಗುವ ಸಮಸ್ಯೆಗಳು

ಗ್ಯಾಸ್ ಗೀಜರ್ ಗಳಿಂದ ಉಂಟಾಗುವ ಸಮಸ್ಯೆ ಪ್ರಮುಖವಾಗಿ ಕಾರ್ಬನ್ ಮಾನಾಕ್ಸೈಡ್ ಮತ್ತು ನೈಟ್ರಸ್ ಆಕ್ಸೈಡ್ ಹೆಚ್ಚಾಗುವಂತೆ ಮಾಡುತ್ತದೆ. ಇದು ಸಾಮಾನ್ಯವಾಗಿ ತಲೆನೋವು, ತಲೆಸುತ್ತು ಮತ್ತು ಮರೆವು ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಕೆಲವರಿಗೆ ಇದರಿಂದ ಕೋಮ ಕೂಡ ಬರುವಂತಹ ಸಾಧ್ಯತೆ ಇರುತ್ತದೆ. ಹೀಗಾಗಿ ಗ್ಯಾಸ್ ಗೀಜರ್ ಇನ್ಸ್ಟಾಲೇಷನ್ ಪ್ರಕ್ರಿಯೆಯಲ್ಲಿ ಸರಿಯಾದ ಮಾನದಂಡಗಳನ್ನು ಅನುಸರಿಸುವುದನ್ನು ಮರೆಯಬೇಡಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement