ಗ್ಯಾಸ್ ಸಿಲಿಂಡರ್‌ ಬಳಕೆ ಮಾಡುವವರಿಗೆ ಹೊಸ ರೂಲ್ಸ್.! ಈ ನಿಯಮ ಪಾಲಿಸುವುದು ಕಡ್ಡಾಯ ಎಂದ ಸರ್ಕಾರ

ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಅನ್ನು ಉಚಿತವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಅಥವಾ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ ವಿತರಣೆ ಮಾಡಿದೆ, ಇದಕ್ಕಾಗಿಯೇ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್ಪಿಜಿ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುವಂತಾಗಿದೆ. ಉಜ್ವಲ ಯೋಜನೆಯ ಅಡಿಯಲ್ಲಿ ಮನೆ ಮನೆಯಲ್ಲಿಯೂ ಇಂದು ಗ್ಯಾಸ್ ಸಿಲಿಂಡರ್ ಬಳಕೆ ಕಾಣಬಹುದು.

ಗ್ಯಾಸ್ ಸಿಲೆಂಡರ್ ಬಳಕೆ ಮಾಡುವಾಗ ಸಾಕಷ್ಟು ಮುತುವರ್ಜಿ ವಹಿಸುವುದು ಅತ್ಯಗತ್ಯ. ಇಲ್ಲವಾದರೆ ದೊಡ್ಡ ಅನಾಹುತವನ್ನೇ ಎದುರಿಸಬೇಕಾಗುತ್ತದೆ. ಗ್ಯಾಸ್ ಬಳಕೆ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದ ಹಾಗೇ ಮುನ್ನೆಚ್ಚರಿಕೆಯನ್ನು ವಹಿಸಲು ಪ್ರತಿಯೊಬ್ಬರಿಗೂ ಸರ್ಕಾರವು ಸೂಚನೆಯನ್ನು ನೀಡಿದೆ. ಇದಕ್ಕಾಗಿಯೇ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ಹೊಸ ರೂಲ್ಸ್ ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ.

Advertisement

ಸಿಲಿಂಡರ್ ಸುರಕ್ಷತೆಗಾಗಿ ಸರ್ಕಾರ ಈ ಹೊಸ ನಿಯಮವನ್ನು ಮಾಡಿದೆ, ಗ್ಯಾಸ್ ಸಿಲಿಂಡರ್ ಬಳಸುವವರು ‘ಪಂಚವಾರ್ಷಿಕ ಅನಿಲ ತಪಾಸಣೆ’ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

ಇನ್ನು ಮುಂದೆ ಭಾರತ ಗ್ಯಾಸ್ ನಂತಹ ಕಂಪನಿಗಳು ಸುರಕ್ಷತೆ ಹೊಂದಿರುವ ಎಲ್‌ಪಿಜಿ ಕನೆಕ್ಷನ್ ಕುಟುಂಬಗಳಿಗೆ ಮಾತ್ರ ಸಿಲಿಂಡರ್ ವಿತರಣೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಗ್ಯಾಸ್ ಸಿಲೆಂಡರ್ ಸುರಕ್ಷತೆ ಇಲ್ಲದೆ ಇರುವ ಕುಟುಂಬಗಳಿಗೆ ಇನ್ನು ಮುಂದೆ ಗ್ಯಾಸ್ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು.

ಅನಿಲ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಾರತ್ ಸಿಲೆಂಡರ್ ಈ ಹೊಸ ಉಪಕ್ರಮ ಕೈಗೊಂಡಿದೆ, ತನ್ನ ಗ್ರಾಹಕರ ಮನೆಗೆ ಸಿಬ್ಬಂದಿಗಳನ್ನು ಕಳುಹಿಸಿ ಪಂಚ ವಾರ್ಷಿಕ ಅನಿಲ ಸುರಕ್ಷತೆ ಬಗ್ಗೆ ಮಾಹಿತಿಯನ್ನು ನೀಡಿ ಗ್ಯಾಸ್ ಸಿಲಿಂಡರ್ ಸುರಕ್ಷತೆ ಪರಿಶೀಲನೆ ನಡೆಸಲಾಗುತ್ತದೆ.

ತಮ್ಮ ಪ್ರತಿ ಗ್ರಾಹಕರ ಮನೆಗೂ ಹೋಗಿ ಗ್ಯಾಸ್ ಸಿಲಿಂಡರ್ ನ ಸುರಕ್ಷತೆಯನ್ನು ಪರೀಕ್ಷೆ ಮಾಡಿ ವರದಿ ಸಲ್ಲಿಸಲಾಗುತ್ತದೆ. ಈ ಸಮಯದಲ್ಲಿ ಗ್ರಾಹಕರು 236 ರೂಪಾಯಿಗಳನ್ನು ಪಾವತಿಯನ್ನು ಮಾಡಬೇಕು ಎಂದು ತಿಳಿಸಿದೆ.

ನಿಮ್ಮ ಗ್ಯಾಸ್ ಸಿಲೆಂಡರ್ ಬಳಕೆ ಸುರಕ್ಷಿತವಾಗಿದ್ದರೆ ಅದೇ ರೀತಿ ವರದಿ ನೀಡಲಾಗುತ್ತದೆ ಹಾಗೂ ಬಳಸುತ್ತಿರುವ ಪೈಪ್ ಅಥವಾ ಟ್ಯೂಬ್ ಯಾವುದೇ ಐದು ವರ್ಷಕ್ಕಿಂತ ಹಳೆಯದಾಗಿದ್ದರೆ ಅಥವಾ ಅಪಾಯದ ಮಟ್ಟವನ್ನು ತಲುಪಿದ್ದರೆ ತಕ್ಷಣವೇ ಅದನ್ನು ಬದಲಾಯಿಸಲು ನಿಮಗೆ ಸೂಚನೆ ನೀಡಲಾಗುವುದು. ಭಾರತ್ ಗ್ಯಾಸ್ ಗ್ರಾಹಕರು ನೀವಾಗಿದ್ದರೆ ನಿಮ್ಮ ಮನೆಗೆ ಸಿಬ್ಬಂದಿಗಳು ಬಂದಾಗ ಅವರ ಐಡೆಂಟಿಟಿ ಕಾರ್ಡ್ ಚೆಕ್ ಮಾಡಿ ನಂತರ ಮನೆಯ ಒಳಗೆ ಬಿಡಿ.. ಇದು ಭಾರತ್ ಗ್ಯಾಸ್ ನೀಡಿರುವ ಸೂಚನೆಯಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement