ಬೆಂಗಳೂರು: 2023ರ ಆಗಸ್ಟ್ ಮಾಹೆಯವರೆಗೆ ಅವಧಿ ಮುಕ್ತಾಯವಾಗುತ್ತಿರುವ 207 ಸದಸ್ಯ ಸ್ಥಾನಗಳಿಗೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವಂತ ಗ್ರಾಮಪಂಚಾಯ್ತಿ ( Grama Panchayat ) 224 ಖಾಲಿ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ( Karnataka State Election Commission ) ಚುನಾವಣೆಯನ್ನು ಘೋಷಣೆ ಮಾಡಿದೆ.
ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆಯನ್ನು ಹೊರಡಿಸಿದ್ದು, 2023ರ ಜೂನ್ ಮಾಹೆಯಿಂದ 2023ರ ಆಗಸ್ಟ್ ವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯ್ತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ( Grama Panchayat General Election ) ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚನಾವಣೆಯನ್ನು ( Grama Panchayat By-Election ) ಘೋಷಿಸಿರುವುದಾಗಿ ತಿಳಿಸಿದೆ.
ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆಯಲ್ಲಿ ದಿನಾಂಕ 06-07-2023ರ ನಾಳೆ ಜಿಲ್ಲಾಧಿಕಾರಿಗಳು ಚನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ದಿನಾಂಕ 12-07-2023ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ 13-07-2023ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ದಿನಾಂಕ 15-07-2023 ಕೊನೆಯಾಗಿದೆ. ದಿನಾಂಕ 23-07-2023ರಂದು ಮತದಾನವು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನ ಅವಶ್ಯಕತೆ ಇದ್ದರೇ 25-07-2023ರಂದು ನಡೆಯಲಿದೆ. ಮತಗಳ ಏಣಿಕೆ ದಿನಾಂಕ 26-07-2023ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ದಿನಾಂಕ 26-07-2023ರಂದು ಚುನಾವಣೆ ಮುಕ್ತಾಯಗೊಳ್ಳಲಿದೆ.