ನವದೆಹಲಿ: ಎಲಾನ್ ಮಸ್ಕ್ ಒಡೆತನದ ಎಕ್ಸ್ (ಟ್ವಿಟರ್) ಕಂಪನಿಯು ತನ್ನ ಗ್ರಾಹಕರಿಗೆ ವಿಡಿಯೋ ಕ್ಲಿಪ್‌ಗಳನ್ನು ಡೌನ್‌ಲೋಡ್ ಮಾಡಲು ಅವಕಾಶ ಕಲ್ಪಿಸಿದೆ.
ಎಲಾನ್ ಮಸ್ಕ್ ಒಡೆತನದ ಎಕ್ಸ್ (ಟ್ವಿಟರ್) ಕಂಪನಿಯು ಇತ್ತೀಚೆಗಷ್ಟೇ ತನ್ನ ಲೋಗೋ ಬದಲಿಸಿ ಹೊಸ ಲೋಗೋ “ಎಕ್ಸ್” ಪರಿಚಯಿಸಿದ್ದು, ಇದೀಗ ಎಕ್ಸ್ ತನ್ನ ಗ್ರಾಹಕರಿಗೆ, ವಿಡಿಯೋ ಕ್ಲಿಪ್‌ಗಳನ್ನು ಡೌನ್‌ಲೋಡ್ ಮಾಡಲು ಅವಕಾಶ ನೀಡಿದೆ.
ವಿಡಿಯೋ ಕ್ಲಿಪ್‌ಗಳನ್ನು ಡೌನ್‌ಲೋಡ್ ಮಾಡಲು ಅವಕಾಶ ನೀಡಿದೆ, ಆದರೆ ವಿಡಿಯೋವನ್ನು ಅಪ್‌ಲೋಡ್ ಮಾಡಿರುವ ಕ್ರಿಯೇಟರ್, ಇದಕ್ಕೆ ಅವಕಾಶ ನೀಡಿದರೆ ಮಾತ್ರ ಡೌನ್‌ಲೋಡ್ ಸಾಧ್ಯ ಎಂದು ಹೇಳಲಾಗಿದೆ.
ಈ ಸೌಲಭ್ಯವು ದೃಢೀಕೃತ ಖಾತೆ ಇರುವವರಿಗೆ ಎಕ್ಸ್‌ಬ್ಲೂ ಸಬ್‌ಸ್ಕ್ರೈಬ್ ಹೊಂದಿರುವ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಎಲಾನ್ ಮಸ್ಕ್ ತಿಳಿಸಿರುವುದಾಗಿ ವರದಿಯಾಗಿದೆ.