ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ಮಾತ್ರ ಎಂದಿಗೂ ಮರೆಯಬಾರದು..!

ಚಳಿಗಾಲದ ಆಹಾರಗಳಲ್ಲಿ ಹುರಿಡಲೆಯ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನುವ ಸಂಪ್ರದಾಯ ಉತ್ತರ ಭಾರತ ಸೇರಿದಂತೆ ಹಲವು ಚಳಿಯೂರುಗಳಲ್ಲಿದೆ. ಇವು ಪ್ರೊಟೀನ್‌ ಹಾಗೂ ಕಾರ್ಬೋಹೈಡ್ರೇಟ್‌ನಿಂದ ಸಮೃದ್ಧವಾಗಿರುವ ಕಾಂಬಿನೇಶನ್.‌ ಇದರಲ್ಲಿರುವ ಝಿಂಕ್‌ ಚರ್ಮದ ಕಾಂತಿಯನ್ನು ಹೆಚ್ಚಿಸಿದರೆ, ಪೊಟಾಶಿಯಂ ಹಾಗೂ ಇತರ ಖನಿಜಾಂಶಗಳು ಮಾಂಸಖಂಡಗಳ ಬಲವರ್ಧನೆಗೆ ಸಹಾಯ ಮಾಡುತ್ತವೆ.

ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಮಲಬದ್ಧತೆಯಂತ ಸಮಸ್ಯೆಗಳಿದ್ದರೆ ಅದಕ್ಕೆ ಮುಕ್ತಿ ನೀಡುವ ಸಾಮರ್ಥ್ಯವೂ ಇದರಲ್ಲಿದೆ. ವಿಶೇಷವೆಂದರೆ, ಇದನ್ನು ತಿನ್ನುವುದರಿಂದ ತೂಕ ಏರುವ ಭಯವಿಲ್ಲ. ಇದು ಒಳ್ಳೆಯ ವರ್ಕೌಟ್‌ ಸ್ನ್ಯಾಕ್‌ ಕೂಡಾ ಹೌದು. ಮುಖ್ಯವಾಗಿ ಮಹಿಳೆಯರಿಗೆ ಋತುಚಕ್ರದ ದಿನಗಳಲ್ಲಿ ಇದರಿಂದ ಸುಸ್ತು ಕಡಿಮೆಯಾಗಿ ಶಕ್ತಿ ದೊರೆಯುತ್ತದೆ. ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಚಳಿಗಾಲದ ಸಮಯಕ್ಕೆ ಕರೆಕ್ಟಾಗಿ ಮಾರುಕಟ್ಟೆಗೆ ಹಾಜರಾಗುವ ನೆಲಗಡಲೆ ಚಳಿಗಾಲದ ಬೆಸ್ಟ್‌ ಆಹಾರ ಕೂಡಾ. ಪ್ರೊಟೀನಿನಿಂದ ಸಮೃದ್ಧವಾಗಿರುವ ಇದರ ಸೇವನೆಯಿಂದ ಚಳಿಗಾಲದಲ್ಲಿ ಶಕ್ತಿ ಸಾಮರ್ಥ್ಯ ಹೆಚ್ಚುವುದಷ್ಟೇ ಅಲ್ಲ, ರೋಗ ನಿರೋಧಕತೆ ಹೆಚ್ಚಿ, ದೇಹವೂ ಬೆಚ್ಚಗಿರುತ್ತದೆ. ಚಳಿಗಾಲದಲ್ಲಿ ತುಪ್ಪ ತಿನ್ನುವುದು ಅತ್ಯಂತ ಅಗತ್ಯ. ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬ ಭ್ರಮೆಯಲ್ಲಿ ತುಪ್ಪವನ್ನು ಸೇವಿಸದೇ ಇರುವವರು ಅನೇಕರು.

ಆದರೆ ತುಪ್ಪ, ಚೆನ್ನಾಗಿ ಜೀರ್ಣಕ್ರಿಯೆ ಆಗುವಂತೆ ನೋಡಿಕೊಂಡು, ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಿತ್ಯ ಉಣ್ಣುವ ದಾಲ್‌, ರಸಂ, ಪರಾಠಾ, ಚಪಾತಿಯ ಮೇಲೆ ತುಪ್ಪ ಹಾಕಿಕೊಂಡು ಚಳಿಗಾಲದಲ್ಲಿ ತಿಂದರೆ ಒಳ್ಳೆಯದು. ಬೆಲ್ಲವನ್ನು ಎಲ್ಲ ಕಾಲದಲ್ಲಿ ಬಳಸುತ್ತೇವಾದರೂ, ಬೆಲ್ಲದ ನಿಜವಾದ ಲಾಭ ತಿಳಿಯುವುದು ಚಳಿಗಾಲದಲ್ಲಿಯೇ. ಕಬ್ಬಿಣಾಂಶ ಹೇರಳವಾಗಿರುವ ಬೆಲ್ಲದಲ್ಲಿ ಸಾಕಷ್ಟು ಇತರ ಖನಿಜಾಂಶಗಳೂ ಇವೆ. ಚಳಿಗಾಲದಲ್ಲಿ ದೇಹವನ್ನು ಇವು ಬೆಚ್ಚಗಿಡುವುದಲ್ಲದೆ ಆರೋಗ್ಯವಾಗಿಡುವಲ್ಲಿ ಸಹಾಯ ಮಾಡುತ್ತದೆ. ನೆಲಗಡಲೆ, ಹುರಿಗಡಲೆಯ ಜೊತೆಗೆ ಬೆಲ್ಲ ಸೇರಿಸಿಯೂ ತಿನ್ನಬಹುದು. ಉತ್ತರ ಭಾರತದಲ್ಲಿ ಅಡುಗೆ ಎಣ್ಣೆಯಾಗಿ ಬಳಸುವ ಸಾಸಿವೆ ಎಣ್ಣೆಯ ಬಳಕೆ ದಕ್ಷಿಣ ಭಾರತದಲ್ಲಿ ಕಡಿಮೆ. ಆದರೆ, ಇದು ದೇಹವನ್ನು ಬೆಚ್ಚಗಿಡುವ ಇನ್ನೊಂದು ಆಹಾರ. ಇದಕ್ಕೆ ದೇಹದಲ್ಲಿ ಬಿಸಿಯನ್ನು ಉತ್ಪತ್ತಿ ಮಾಡುವ ಗುಣವಿದೆ. ಅತಿಯಾಗಿ ಚಳಿಯಿದ್ದಾಗ ಪಾದದ ಅಡಿಭಾಗಕ್ಕೆ ಸಾಸಿವೆ ಎಣ್ಣೆಯಿಂದ ಮಸಾಜ್‌ ಮಾಡಿ ಮಲಗುವುದರಿಂದ ದೇಹ ಬೆಚ್ಚಗಿರುತ್ತದೆ. ಜೊತೆಗೆ, ಶೀತ, ನೆಗಡಿಯಂಥ ತೊಂದರೆಗಳೂ ಬರುವುದಿಲ್ಲ. ಎಳ್ಳಿನಲ್ಲಿ ಅತ್ಯಧಿಕ ಪೋಷಕಾಂಶಗಳಿದ್ದು, ಚಳಿಗಾಲಕ್ಕೆ ಅಗತ್ಯವಾಗಿ ತಿನ್ನಬೇಕಾದ ಆಹಾರಗಳಲ್ಲಿ ಇದೂ ಒಂದು. ಇದು ದೇಹವನ್ನು ಬೆಚ್ಚಗಾಗಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.

Advertisement

ಎಳ್ಳಿನ ಚಿಕ್ಕಿ, ಉಂಡೆಗಳ ರೂಪದಲ್ಲಿ ಇದನ್ನು ಚಳಿಗಾಲದಲ್ಲಿ ತಿನ್ನುವುದು ಬಹಳ ಒಳ್ಳೆಯದು. ಶೀತ, ನೆಗಡಿ, ಕೆಮ್ಮು ಮತ್ತಿತರ ತೊಂದರೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿರುವ ಆಹಾರ ಶುಂಠಿ ಚಳಿಗಾಲಕ್ಕೆ ಅದ್ಭುತ ಸಾಥ್‌ ನೀಡುತ್ತದೆ. ಇದರಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವ ಗುಣವಿದ್ದು, ದೇಹವನ್ನು ಬೆಚ್ಚಗಿಡುವಲ್ಲಿ ತನ್ನ ಕಾಣಿಕೆ ನೀಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement