ಮೇ 10ರಿಂದ ಗಂಗೋತ್ರಿ – ಯಮುನೋತ್ರಿ ಮತ್ತು ಕೇದಾರನಾಥ ಧಾಮ, ಭಕ್ತರಿಗೆ ಬಾಗಿಲು ತೆರೆದರೆ, ಮೇ 12ರಿಂದ ಬದರಿನಾಥದಲ್ಲಿ ಯಾತ್ರಾರ್ಥಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೋವಿಡ್ ಬಳಿಕ ಇದೀಗ ಚಾರ್ಧಾಮ್ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಈ ವರ್ಷದ ಕೂಡ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಧಾಮ್ ಯಾತ್ರೆ ನಡೆಸಿದ್ದಾರೆ. ಕಳೆದ 13 ದಿನಗಳ ಹಿಂದೆ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥದ ಪವಿತ್ರ ಸ್ಥಳಗಳಿಗೆ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದ್ದು, ಈ ವೇಳೆ 42 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಒಂದೇ ಕಡೆ ತುಂಬಾ ಜನ ಸೇರುತ್ತಿರುವುದರಿಂದ ಉಸಿರಾಟದ ಸಮಸ್ಯೆಯಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೇದಾರನಾಥ ಒಂದರಲ್ಲೇ 19 ಮಂದಿ ಸಾವನ್ನಪ್ಪಿದ್ರೆ, ಯಮುನೋತ್ರಿಯಲ್ಲಿ 12, ಬದರಿನಾಥದಲ್ಲಿ 9 ಮತ್ತು ಗಂಗೋತ್ರಿಯಲ್ಲಿ 2 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.