ಬೆಂಗಳೂರು : ಡಿವೈಡರ್ಗೆ ಗುದ್ದಿ ಮೂರು ಪಲ್ಟಿ ಹೊಡೆದ್ರೂ ಗಾಯವಿಲ್ಲದೇ ಪಾರಾದ ಯುವಕನ ಜೀವ ಉಳಿಸಿತ್ತು ಆ ಕಾರಿನ ಸೀಟ್ ಬೆಲ್ಟ್.
ಹೌದು ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ ಎಂದು ಸಂಚಾರಿ ಪೊಲೀಸರು ನಿರಂತರ ಜಾಗೃತಿ ಮೂಡಿಸುತ್ತಿದ್ರೆ ಅದರ ಫಲಿತಾಂಶ ಮಾತ್ರ ಅಷ್ಟಕಷ್ಟೆ.ಸೀಟ್ ಬೆಲ್ಟ್ ಧರಿಸದೆ ಅನೇಕರು ವಾಹನ ಚಲಾಯಿಸುತ್ತಿದ್ದು, ಅನೇಕರು ಇದರಿಂದ ಪ್ರಾಣಕಳಕೊಂಡಿದ್ದಾರೆ. ಆದ್ರೆ ಈ ಪ್ರಕರಣದಲ್ಲಿ ಯುವಕ ಸಂಚಾರಿ ನಿಯಮ ಪಾಲಿಸಿದ್ದರಿಂದ ಪ್ರಾಣ ಉಳಿದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ಗೆ ಗುದ್ದಿ ಗಾಳಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ಓರ್ವ ಯುವಕ ಕಾರಿನಲ್ಲಿ ಹೊರಟಿದ್ದ. ದಾರಿ ಮಧ್ಯೆ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಕಾರು ಚಾಲಕ ಸೀಟ್ ಬೆಲ್ಟ್ ಧರಿಸಿದ್ದರಿಂದ ಪ್ರಾಣ ಉಳಿದಿದೆ. ಕಾರಿನ ಏರ್ ಬ್ಯಾಗ್ ಎಲ್ಲವೂ ಓಪನ್ ಆಗಿದೆ. ಇದರಿಂದ ಚಿಕ್ಕ ಗಾಯವಿಲ್ಲದೆ ಯವಕ ಬಚಾವ್ ಆಗಿದ್ದಾನೆ. ಹೆದ್ದಾರಿ ಡಿವೈಡರ್ ಕೂಡ ಪೀಸ್ ಪೀಸ್ ಆಗಿದ್ದರೆ, ಸೂಚನಾ ಫಲಕ ಸರ್ವೀಸ್ ರಸ್ತೆಗೆ ಬಿದ್ದಿದೆ ಆದ್ರೆ ಆ ಸೀಟ್ ಬೆಲ್ಟ್ ಆ ಯುವಕನ ಜೀವ ರಕ್ಷಿಸಿದೆ.