ಚಿತ್ರದುರ್ಗ: ಎಸ್.ಎಫ್.ಸಿ ಅನುದಾನದ ಶೇ.7.25 ಯೋಜನೆಯಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಶೇ.5 ಯೋಜನೆಯಡಿ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ಸೈಕಲ್ ವಿತರಣೆಗೆ ಸೇರಿದಂತೆ ವಿವಿಧ ಯೋಜನೆಗಳಿಗೆ ನಗರಸಭೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 9 ಕಡೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ನಗರಸಭೆ ವೆಬ್ ಸೈಟ್ www.chitradurgacity.mrc.gov.in ಅಥವಾ ಕಚೇರಿಗೆ ಭೇಟಿ ನೀಡುವಂತೆ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.