ನವದೆಹಲಿ : ಚುನಾವಣೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕುರಿತು ಕೇಂದ್ರ ಚುನಾವಣಾ ಆಯೋಗವು ಇಂದು ಮಹತ್ವದ ಆದೇಶ ಹೊರಡಿಸಿದೆ. ಚುನಾವಣಾ ಪ್ರಕ್ರಿಯೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ಸಹಿಸುವುದಿಲ್ಲ, ಯಾವುದೇ ಕಾರಣಕ್ಕೂ ಇನ್ಮುಂದೆ ಪಕ್ಷಗಳಾಗಲಿ, ಅಭ್ಯರ್ಥಿಗಳಾಗಲಿ, 18 ವರ್ಷದ ಒಳಗಿನ ಮಕ್ಕಳನ್ನ, ಭಿತ್ತಿಪತ್ರಗಳನ್ನು ಹಂಚಲು, ಘೋಷಣೆಗಳನ್ನು ಕೂಗಲು , ಪ್ರಚಾರ ಅಥವಾ ಚುನಾವಣಾ ಸಭೆಗಳಲ್ಲಿ ಸೇರಿಸಿಕೊಳ್ಳಬಾರದು. ತಪ್ಪಿದ್ದಲ್ಲಿ ಕಾನೂನಿನ ಪ್ರಕಾರ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾ ಆಯೋಗ ನೇರ ಎಚ್ಚರಿಕೆ ನೀಡಿದೆ.