ಅಮೆರಿಕ: ಅಧ್ಯಕ್ಷೀಯ ಚುನಾವಣೆಗೆ ಮುನ್ನ ಪೆನ್ಸಿಲ್ವೇನಿಯಾದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡು ಹಾರಿಸಲಾಗಿದೆ.
78ರ ಹರೆಯದ ನಾಯಕ ರ್ಯಾಲಿಯಲ್ಲಿ ಗುಂಡಿನ ಮೊರೆತ ಕೇಳಿ ವೇದಿಕೆಯ ಹಿಂದೆ ಅಡಗಿಕೊಂಡಿದ್ದಾರೆ. ಬಲ ಕಿವಿಗೆ ರಕ್ತಗಾಯವಾಗಿದ್ದು, ಅವರನ್ನು ಸುತ್ತುವರೆದಿರುವ ರಹಸ್ಯ ಸೇವಾ ಏಜೆಂಟ್ ಗಳು ತ್ವರಿತವಾಗಿ ವೇದಿಕೆಯಿಂದ ಹೊರಗೆ ಕರೆದೊಯ್ದರು.
ದಾಳಿ ಮಾಡುವ ಮೊದಲು ಸೆರೆಹಿಡಿಯಲಾದ ಕ್ಷಣಗಳಲ್ಲಿ ಟ್ರಂಪ್ ಮುಖದ ಹಿಂದೆ ಗುಂಡು ಹಾರುತ್ತಿರುವುದನ್ನು ಕಾಣಬಹುದು. ನ್ಯೂಯಾರ್ಕ್ ಟೈಮ್ಸ್ ಛಾಯಾಗ್ರಾಹಕ ಡೌಗ್ ಮಿಲ್ಸ್ ಅವರು ಕ್ಲಿಕ್ ಮಾಡಿದ ಚಿತ್ರದಲ್ಲಿ ಟ್ರಂಪ್ ಅವರ ಕೆನ್ನೆಯ ಬಳಿ ಬುಲೆಟ್ ಸಾಗಿ ಪ್ರೇಕ್ಷಕರತ್ತ ನುಗ್ಗಿದೆ.
ಈವೆಂಟ್ ಮೈದಾನದ ಸಮೀಪವಿರುವ ಕಟ್ಟಡದ ಛಾವಣಿಯ ಮೇಲೆ ಟ್ರಂಪ್ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ತಾನು ನೋಡಿದ್ದೇನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಈ ದಾಳಿಯು ಅಮೆರಿಕದ ಎರಡೂ ಕಡೆಯ ರಾಜಕೀಯ ನಾಯಕರನ್ನು ಒಂದುಗೂಡಿಸಿದೆ ಮತ್ತು ಟ್ರಂಪ್ರ ಪ್ರತಿಸ್ಪರ್ಧಿ ಮತ್ತು US ಅಧ್ಯಕ್ಷ ಜೋ ಬಿಡೆನ್ ಅವರು ದಾಳಿಯನ್ನು ಖಂಡಿಸಿದರು, ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ.
ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್