ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ಟಿಕೆಟ್ ಕೊಡಿಸೋದಾಗಿ ವಂಚನೆ ಪ್ರಕರಣದಲ್ಲಿ, ಈವರೆಗೆ ಸಿಸಿಬಿ ಪೊಲೀಸರಿಂದ ಆರೋಪಿಗಳಿಂದ ಶೇ.88ರಷ್ಟು ಮೊತ್ತ ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳಿಂದ 3.67 ಕೋಟಿ ಜಪ್ತಿ ಮಾಡಿದ್ದರೇ, ಅಭಿನವ ಹಾಲಶ್ರೀ 25 ಲಕ್ಷ ಕೊಟ್ಟು ಖರೀದಿಸಿದ್ದಂತ ಕಾರನ್ನು ಜಪ್ತಿ ಮಾಡಿದ್ದಾರೆ.
ಇನ್ನೂ ಪ್ರಕರಣದ ಪ್ರಮುಖ ಆರೋಪಿಗಳಾದಂತ ಚೈತ್ರಾ ಕುಂದಾಪುರ, ಹಿರೇಹಡಗಲಿ ಅಭಿನವ ಹಾಲಶ್ರೀ ಹಾಗೂ ಇತರರಿಗೆ ಸೇರಿದ್ದಂತ ಜಾಗದಲ್ಲಿ ನಿರಂತರವಾಗಿ ಶೋಧ ಕಾರ್ಯವನ್ನು ಸಿಸಿಬಿ ಪೊಲೀಸರು ಮುಂದುವರೆಸಿದ್ದಾರೆ.