ನಾವು ಸಣ್ಣವರಿದ್ದಾಗ ಅದೆಷ್ಟೋ ಬಾರಿ ಚ್ಯೂಯಿಂಗ್ ಗಮ್ ನುಂಗಿರುತ್ತೇವೆ. ಆಗ ತುಂಬಾ ಗಾಬರಿ ಆಗಿ, ಅಯ್ಯೋ ಹೊಟ್ಟೆ ಒಳಗೆ ಚ್ಯೂಯಿಂಗ್ ಗಮ್ ಹೋಯಿತು ಏನಾಗುತ್ತೋ ಅಂತ ಭಯ ಪಟ್ಟಿರುತ್ತೇವೆ. ಆದರೆ ನಿಜವಾಗಿಯೂ ಏನಾಗುತ್ತೆ ಅಂತ ತಿಳಿಯೋಣ. ಚೂಯಿಂಗ್ ಗಮ್ ಅನ್ನು ಪದೇ ಪದೇ ನುಂಗಿದರೆ, ಅದು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಇದರಿಂದ ನಿಮ್ಮ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಪ್ರಸ್ತುತ ಚೂಯಿಂಗ್ ಗಮ್, ಗಮ್ ಬೇಸ್ , ಸಿಹಿಕಾರಕಗಳು, ಮೃದುಗೊಳಿಸುವಿಕೆಗಳು / ಪ್ಲಾಸ್ಟಿಸೈಜರ್‌ಗಳು , ಸುವಾಸನೆಗಳು, ಬಣ್ಣಗಳು ಮತ್ತು ವಿಶಿಷ್ಟವಾಗಿ, ಗಟ್ಟಿಯಾದ ಅಥವಾ ಪುಡಿಮಾಡಿದ ಪಾಲಿಯೋಲ್ ಲೇಪನದಿಂದ ಕೂಡಿದೆ. ಚ್ಯೂಯಿಂಗ್ ಗಮ್ ಹೊಟ್ಟೆಗೆ ಹೋದರೆ ಅದು ಯಾವುದೇ ಕಾರಣಕ್ಕೆ ಜೀರ್ಣವಾಗುವುದಿಲ್ಲ. ಚ್ಯೂಯಿಂಗ್ ಗಮಲ್ಲಿ ಅಂಟಿನ ವಸ್ತು ಅಧಿಕವಾಗಿರುವುದರಿಂದ ಜೀರ್ಣರಸಗಳಿಂದ ಚ್ಯೂಯಿಂಗ್ ಗಮ್ ಜೀರ್ಣವಾಗುವುದಿಲ್ಲ. ಸುಮಾರು 40 ಗಂಟೆ ಹೊಟ್ಟೆಯಲ್ಲಿ ಉಳಿಯುತ್ತದೆ. ನಂತರ ಅದು ಮಲದ ರೂಪದಲ್ಲಿ ಹೊಟ್ಟೆಯಿಂದ ಹೊರಗೆ ಬರುತ್ತದೆ. ಮಕ್ಕಳು ಪದೇ ಪದೇ ಚ್ಯೂಯಿಂಗ್ ಗಮ್ ನುಂಗಿದರೆ ಅದು ಮಗುವಿನ ಆರೋಗ್ಯದಲ್ಲಿ ಪರಿಣಾಮ ಬೀರುತ್ತದೆ. ನಿಮ್ಮ ಮಗುವಿಗೆ ಮಲಬದ್ದತೆ ಏನಾದರೂ ಇದ್ದರೆ ಈ ಬಬಲ್ ಗಮ್ ಅನಾಹುತಕಾರಿ ಆಗಬಲ್ಲದು. ಇದು ಕರುಳಿನಲ್ಲಿ ಸೇರಿಕೊಂಡು ಕರುಳಿನಲ್ಲಿ ಬ್ಲಾಕೇಜ್ ಆರಂಭವಾಗಬಹುದು. ಈ ರೀತಿ ಕರುಳಿನಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ದೇಹವು ಅವುಗಳನ್ನು ಕರಗಿಸಲು ಬೇಕಾದ ಜೀರ್ಣಕಾರಿ ಕಿಣ್ವಗಳನ್ನು ಸಹ ಉತ್ಪಾದಿಸುವುದಿಲ್ಲ. ಅದಕ್ಕಾಗಿಯೇ ಅದು ಹೊಟ್ಟೆಯಲ್ಲಿ ಅನೇಕ ಬಾರಿ ಉಳಿಯುತ್ತದೆ. ಚೂಯಿಂಗ್ ಗಮ್ ಅನ್ನು ಅತಿಯಾಗಿ ಜಗಿಯುವುದರಿಂದ ಹೊಟ್ಟೆಯಲ್ಲಿ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ. ಉದಾಹರಣೆಗೆ, ಇದು ಹೊಟ್ಟೆಯ ಕಿರಿಕಿರಿ ಮತ್ತು ಗ್ಯಾಸ್ ಸಮಸ್ಯೆಗಳನ್ನು ಉಂಟು ಮಾಡುತ್ತದೆ.