ಛತ್ತೀಸ್‌ಗಢ: ನೀರಿನ ಬಾವಿಯಲ್ಲಿ ಪೆಟ್ರೋಲ್ ಪತ್ತೆ : ಸಂಗ್ರಹಕ್ಕೆ ಮುಗಿಬಿದ್ದ ಜನ…!!

WhatsApp
Telegram
Facebook
Twitter
LinkedIn
ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡದ ಗೀದಾಮ್‌ ನಗರದಲ್ಲಿ ನೀರಿನ ಬಾವಿಗಳಲ್ಲಿ ಪೆಟ್ರೋಲ್‌ ಸಿಕ್ಕಿದ್ದು, ಗ್ರಾಮಸ್ಥರು ಅದನ್ನು ಬಕೆಟ್‌ಗಳಲ್ಲಿ ತುಂಬಿಕೊಂಡು ಹೋಗಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಮುಂಜಾನೆ ಎಂದಿನಂತೆ ಗ್ರಾಮಸ್ಥರು ನೀರು ಸಂಗ್ರಹಿಸಲು ಹೋದಾಗ ಪೆಟ್ರೋಲ್‌ ಪತ್ತೆಯಾಗಿದೆ. ಸುದ್ದಿ ತಿಳಿದ ಅಕ್ಕಪಕ್ಕದ ಹಳ್ಳಿಗಳ ಜನರೂ ಬಂದು ಅದನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರಿಗೂ ಮಾಹಿತಿ ಸಿಕ್ಕಿದ್ದರಿಂದ ಸ್ಥಳಕ್ಕೆ ಧಾವಿಸಿ ಬಂದರು. ತನಿಖೆಗೆ ನಡೆಸಿದಾಗ ಕುತೂಹಲಕಾರಿ ವಿಚಾರ ಗೊತ್ತಾಯಿತು. ಪೆಟ್ರೋಲ್‌ ಬಂಕ್‌ ಮಾಲೀಕರೊಬ್ಬರು ಭೂಗತ ಟ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಪೆಟ್ರೋಲ್‌ ಕಾಣೆಯಾಗಿದ್ದರ ಬಗ್ಗೆ ದೂರು ನೀಡಿದ್ದರು. ತನಿಖೆ ಬಳಿಕ ಟ್ಯಾಂಕ್‌ ಬಿರುಕು ಬಿಟ್ಟದ್ದರಿಂದ ಪೆಟ್ರೋಲ್‌ ಸೋರಿಕೆಯಾಗಿ ಬಾವಿಗಳಿಗೆ ಸೇರಿದೆ ಎಂದು ಖಚಿತವಾಯಿತು.
ನೀರು ಮಿಶ್ರಿತ ಪೆಟ್ರೋಲ್‌ನಿಂದ ಗ್ರಾಮದಲ್ಲಿ ಬೆಂಕಿ ಆಕಸ್ಮಿಕ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲ್ಲಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ.ನೀರಿನಲ್ಲಿ ಪೆಟ್ರೋಲ್‌ ಮಿಶ್ರಣ ತಿಳಿಯಾಗುವ ವರೆಗೆ ವಿದ್ಯುತ್‌ ಪೂರೈಕೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ತಿಳಿಯಲಾಗಿದೆ.
BC Suddi   About Us
For Feedback - [email protected]

Related News

LATEST Post

WhatsApp Icon Telegram Icon